ಕಾಸರಗೋಡು: ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರಚಾರ ವೆಚ್ಚಗಳನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿಶೇಷ ಪರಿಶೀಲನಾ ಸಭೆ ನಡೆಸಲಾಯಿತು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕ ವೀಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು. ಚುನಾವಣಾ ಆಯೋಗವು ನಿಗದಿಪಡಿಸಿದ ವೆಚ್ಚ ಪೆÇ್ರೀಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದರು. ಚುನಾವಣಾ ಪ್ರಚಾರ ಅಥವಾ ಕಾರ್ಮಿಕರ ಪ್ರಯಾಣಕ್ಕಾಗಿ ಬಳಸುವ ಎಲ್ಲಾ ರೀತಿಯ ವಾಹನಗಳಿಗೆ ಚುನಾವಣಾ ಅಧಿಕಾರಿಯಿಂದ ನಿಗದಿತ ನಮೂನೆಯಲ್ಲಿ ಅನುಮತಿ ಪಡೆಯಬೇಕೆಂದು ವೀಕ್ಷಕರು ನಿರ್ದೇಶಿಸಿದರು.
ಕಾಸರಗೋಡು, ಮಂಜೇಶ್ವರ ಮತ್ತು ಉದುಮ ಕ್ಷೇತ್ರಗಳ ವೆಚ್ಚ ವೀಕ್ಷಕರಾದ ನಿಶಾಂತ್ ಅಗರ್ವಾಲ್ ಐ.ಆರ್.ಎಸ್ ಕಾಞಂಗಾಡ್ ಮತ್ತು ತ್ರಿಕರಿಪುರ ಕ್ಷೇತ್ರಗಳ ವೆಚ್ಚ ವೀಕ್ಷಕರಾದ ಅಜಯ್ ಕುಮಾರ್ ಥಾಡಿಯಾ ಐ.ಆರ್.ಎಸ್, ವೆಚ್ಚ ನೋಡಲ್ ಅಧಿಕಾರಿ ವಿ. ಚಂದ್ರನ್, ಗಣಕೀಕರಣ, ಐಟಿ/ಐಸಿಟಿ ಅರ್ಜಿ ನೋಡಲ್ ಅಧಿಕಾರಿ ಕೆ. ಲೀನಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


.jpg)
