HEALTH TIPS

ಉದ್ವಿಗ್ನತೆ ಶಮನಕ್ಕೆ ಮಧ್ಯಸ್ಥಿಕೆ: ವೇದಿಕೆಯಲ್ಲೇ ಜಾರಿ ಬಿದ್ದ ಪಾಕ್ ಉಪ ಪ್ರಧಾನಿ

ಇಸ್ಲಾಮಾಬಾದ್‌: ಪಾಕಿಸ್ತಾನ ಉಪ ಪ್ರಧಾನಿ ಇಶಾಕ್‌ ದರ್‌ ಅವರು ಈಜಿಪ್ಟ್‌ ವಿದೇಶಾಂಗ ಸಚಿವ ಬದ್ರ್‌ ಅಬ್ದೆಲಟ್ಟಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಜಾರಿ ಬಿದ್ದಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಭಾನುವಾರ ನಡೆದ ಔಪಚಾರಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಜಾರುತ್ತಿದ್ದಂತೆ, ನಿಯಂತ್ರಣ ಕಳೆದುಕೊಂಡು ಬಿದ್ದ ದರ್‌ ಅವರತ್ತ ಧಾವಿಸಿದ ಸಿಬ್ಬಂದಿ, ಕೂಡಲೇ ಅವರನ್ನು ಮೇಲೆತ್ತಿದ್ದಾರೆ. ಈ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಘಟನೆ ಸಂಬಂಧ ಸೋಮವಾರ ಮಾಹಿತಿ ನೀಡಿರುವ ಅವರ ಪುತ್ರ ಅಲಿ ದರ್‌, ಇಶಾಕ್‌ ಅವರ ಮೂಳೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ ಎಂದಿದ್ದಾರೆ.

ಭಾನುವಾರ ಕಾರ್ಯಕ್ರಮದ ಬಳಿಕ ಹೇಳಿಕೆ ಬಿಡುಗಡೆ ಮಾಡುವ ಸಂದರ್ಭದಲ್ಲಿ, ಇಶಾಕ್‌ ಅವರು ಕ್ಷೇಮವಾಗಿರುವಂತೆಯೇ ಕಂಡಿದ್ದರು. ಆದರೆ, ಕಸಿವಿಸಿಯಾಗುವುದನ್ನು ತಪ್ಪಿಸುವ ಸಲುವಾಗಿ ನೋವು ನಿವಾರಕ ಮಾತ್ರೆ ಸೇವಿಸಿದ್ದರು ಎಂಬುದನ್ನು ಅಲಿ ಬಹಿರಂಗಪಡಿಸಿದ್ದಾರೆ.

'ಇಶಾಕ್‌ ದರ್‌ ಅವರು ಈಜಿಪ್ಟ್‌ ವಿದೇಶಾಂಗ ಸಚಿವರನ್ನು ಸ್ವಾಗತಿಸುವ ಸಮಾರಂಭದ ವೇಳೆ ಗಾಯಗೊಂಡಿದ್ದರು. ಆದಾಗ್ಯೂ, ನೋವು ನಿವಾರಕಗಳನ್ನು ಸೇವಿಸಿ, ಇಡೀ ದಿನ ನಡೆದ ಉನ್ನತ ಮಟ್ಟದ ಸಭೆಗಳನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿದ್ದಾರೆ' ಎಂದು ದರ್‌ ಟ್ವೀಟ್ ಮಾಡಿದ್ದಾರೆ.

ಇರಾನ್‌ ವಿರುದ್ಧ ಅಮೆರಿಕ, ಇಸ್ರೇಲ್‌ ನಡೆಸುತ್ತಿರುವ ಯುದ್ಧದಿಂದಾಗಿ ಪಶ್ಚಿಮ ಏಷ್ಯಾದಾದ್ಯಂತ ಸೃಷ್ಟಿಯಾಗಿರುವ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾ, ಈಜಿಪ್ಟ್‌ ಹಾಗೂ ಟರ್ಕಿ ವಿದೇಶಾಂಗ ಸಚಿವರೊಂದಿಗಿನ ಸಭೆಗೆ ಭಾನುವಾರ ಹಾಗೂ ಸೋಮವಾರ ಪಾಕಿಸ್ತಾನ ಆತಿಥ್ಯ ವಹಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries