ವಿಯೆನ್ನಾ: ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ವೈಮಾನಿಕ ದಾಳಿ ವೇಳೆ, ಇರಾನ್‌ನ ನಟಾಂಜ್ ಪರಮಾಣು ಸ್ಥಾವರದಲ್ಲಿನ ವಿಕಿರಣಶೀಲ ಲೋಹ ಶುದ್ಧೀಕರಣ ಘಟಕಕ್ಕೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ(ಐಎಇಎ) ಮಂಗಳವಾರ ಹೇಳಿದೆ.
'ಪರಮಾಣು ಸ್ಥಾವರದ ಪ್ರವೇಶದಲ್ಲಿನ ಕಟ್ಟಡಗಳಿಗೆ ಹಾನಿಯಾಗಿದೆ. ಈ ಹಾನಿಯಿಂದಾಗಿ ವಿಕಿರಣ ಸೋರಿಕೆಯಾಗುವ ಸಾಧ್ಯತೆಗಳು ಕಡಿಮೆ' ಎಂದೂ ಏಜೆನ್ಸಿ ಹೇಳಿದೆ.

