ಉಪ್ಪಳ: ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಕಾವು ಬಿರುಸುಗೊಂಡಿರುವಂತೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್‍ರ ಪರ ಪ್ರಚಾರಾರ್ಥವಾಗಿ ಕರ್ನಾಟಕದ ಬಿಜೆಪಿ ಮುಖಂಡರು ಮಂಜೇಶ್ವರ ಮಂಡಲದಲ್ಲಿ ವಿವಿಧೆಡೆ ಮತಯಾಚನೆ ನಡೆಸಿದರು. ಮಂಗಲ್ಪಾಡಿಯ ಹೇರೂರಿನಲ್ಲಿ, ಪೈವಳಿಕೆ ಪಂಚಾಯತಿಯ ತಾಳ್ತಜೆ ಪರಿಶಿಷ್ಟ ವರ್ಗದ ಕಾಲನಿಗೆ ಬಿಜೆಪಿ ಕಾರ್ಯಕರ್ತರ ಜೊತೆ ಕರ್ನಾಟಕ ಮಾಜಿ ಸಚಿವ ಅಂಗಾರ ಭೇಟಿ ಮಾಡಿ ಮತಯಾಚನೆ ನಡೆಸಿದರು. ಈ ವೇಳೆ ಪಂಚಾಯತಿ ಸದಸ್ಯ ರಾಮ ಏದಾರ್, ಗಣೇಶ ಚೇರಾಲು, ಕಾರ್ಯಕರ್ತರು ಉಪಸ್ಥಿತರಿದ್ದರು. ಕುಂಬಳೆ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಕುಟುಂಬ ಸಭೆಗಳಲ್ಲಿ ಭಾಗವಹಿಸಿದರು. ವರ್ಕಾಡಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಈ ವೇಳೆ ಬಿಜೆಪಿ ನೇತಾರರು ಕಾರ್ಯಕರ್ತರು ಉಪಸ್ಥಿತರಿದ್ದರು.

.jpg)
