ಉಪ್ಪಳ: ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಐಕ್ಯ ಪ್ರಜಾಪ್ರಭುತ್ವ ರಂಗದ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್‍ರ ವಿಜಯಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕೆಂದು ಜಿಲ್ಲಾ ಪಂಚಾಯತಿ ಸದಸ್ಯ ಸೋಮಶೇಖರ ಜೆ.ಎಸ್. ಹೇಳಿದರು.
ಪೈವಳಿಕೆ ಪಂ. ಯು.ಡಿ. ಎಫ್. ಚುನಾವಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಯು.ಡಿ.ಎಫ್. ಪಂ.ಸಮಿತಿ ಚೆಯರ್‍ಮ್ಯಾನ್ ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಯು.ಡಿ.ಎಫ್. ಕ್ಷೇತ್ರ ಸಂಚಾಲಕ ಆಸೀಸ್ ಮರಿಕ್ಕೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಡಿ.ಎಂ ಕೆ ಮೊಹಮ್ಮದ್, ಲಕ್ಷ್ಮಣ ಪ್ರಭು, ಬ್ಲೋಕ್ ಪಂ. ಅಧ್ಯಕ್ಷ ಸೈಪುsಲ್ಲಾ ತಂಙಳ್, ಜಿಲ್ಲಾ ಪಂ. ಸದಸ್ಯ ಹರ್ಷಾದ್ ವರ್ಕಾಡಿ ಮಾತನಾಡಿದರು. ನೇತಾರರಾದ ಅಬ್ದುಲ್ ಹಮೀದ್, ಮೋಹನ ರೈ, ಸಾಲಿ ಹಾಜಿ, ಹಮೀದ್ ಕುಂಞÁಲಿ, ಬದ್ರುನ್ನೀಸ ಸಲೀಂ, ರಾಘವೇಂದ್ರ ಭಟ್, ಮೋನಪ್ಪ ಶೆಟ್ಟಿ, ಅಬ್ದುಲ್ಲ ಹಾಜಿ, ಪಂ. ಸದಸ್ಯರು ಉಪಸ್ಥಿತರಿದ್ದರು. ಝಡ್.ಎ ಕಯ್ಯಾರ್ ಸ್ವಾಗತಿಸಿದರು. ಅಸೀಸ್ ಕಳಾಯಿ ವಂದಿಸಿದರು. ವಸಂತ ಮಾಸ್ತರ್ (ಚೆಯರ್‍ಮ್ಯಾನ್), ಝಡ್.ಎ. ಕಯ್ಯಾರ್ (ಪ್ರಧಾನ ಸಂಚಾಲಕ), ಅಸೀಸ್ ಕಳಾಯಿ (ಸಂಚಾಲಕ), ರಾಘವೇಂದ್ರ ಭಟ್ (ಖಜಾಂಚಿ) ಒಳಗೊಂಡ 251 ಸದಸ್ಯರ ಚುನಾವಣಾ ಸಮಿತಿ ರೂಪೀಕಸಲಾಯಿತು.

.jpg)
