HEALTH TIPS

ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚಳ: ಕಾರಣಗಳು ಇಲ್ಲಿವೆ

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್ ಮತ್ತು ಸಂಬಂಧಿತ ಸಾವುಗಳಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕೇಂದ್ರ ಆರೋಗ್ಯ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಅವರು ರಾಜ್ಯಸಭೆಯಲ್ಲಿ ಸಲ್ಲಿಸಿದ ಐಸಿಎಂಆರ್-ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ವರದಿಯಲ್ಲಿ ಈ ಅಂಕಿಅಂಶಗಳನ್ನು ನೀಡಲಾಗಿದೆ. 2021 ರಲ್ಲಿ 14.26 ಲಕ್ಷದಿಂದ 2025 ರಲ್ಲಿ 15.7 ಲಕ್ಷಕ್ಕೆ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿ ಗಮನಸೆಳೆದಿದೆ. ಪ್ರತಿ ವರ್ಷ ಸರಾಸರಿ 28,000 ಹೊಸ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. 2021 ರಲ್ಲಿ 7,89,202 ರಿಂದ 2025 ರಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪುವವರ ಸಂಖ್ಯೆ 8,68,588 ಕ್ಕೆ ಏರಿದೆ. ಕ್ಯಾನ್ಸರ್ ಸಾವುಗಳು ಪ್ರತಿ ವರ್ಷ 15,000 ರಷ್ಟು ಹೆಚ್ಚಾಗಿದೆ. 


ಉತ್ತರ ಪ್ರದೇಶ ಮುಂದು: 

ಈ ಅವಧಿಯಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳನ್ನು ದಾಖಲಿಸಿದ ರಾಜ್ಯ ಉತ್ತರ ಪ್ರದೇಶ. 2021 ರಲ್ಲಿ, ಇಲ್ಲಿ ಕ್ಯಾನ್ಸರ್ ಪ್ರಕರಣಗಳು 2.06 ಲಕ್ಷವಾಗಿದ್ದು, ಇದು 2025 ರ ವೇಳೆಗೆ 2.26 ಲಕ್ಷಕ್ಕೆ ಏರಿತು. ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯಲ್ಲಿ ಬಿಹಾರ ಮತ್ತು ಮಹಾರಾಷ್ಟ್ರ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಕ್ಯಾನ್ಸರ್ ಸಾವುಗಳ ಬೆಳವಣಿಗೆಯಲ್ಲಿ ಉತ್ತರ ಪ್ರದೇಶವೂ ಅಗ್ರಸ್ಥಾನದಲ್ಲಿದೆ. ಈ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ 11,000 ಕ್ಕೂ ಹೆಚ್ಚು ಸಾವುಗಳು ಹೆಚ್ಚಾಗಿದೆ. ಕ್ಯಾನ್ಸರ್ ಸಾವುಗಳ ಹೆಚ್ಚಳದಲ್ಲಿ ಬಿಹಾರ ಮತ್ತು ಮಹಾರಾಷ್ಟ್ರ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಕಾರಣಗಳು:

ರೋಗನಿರ್ಣಯ ಸೌಲಭ್ಯಗಳಲ್ಲಿನ ಹೆಚ್ಚಳವು ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳ ದಾಖಲಾತಿಗೆ ಕಾರಣವಾಗಬಹುದು ಎಂದು ನವದೆಹಲಿಯ ಏಮ್ಸ್‍ನ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್ ಡಾ. ಮುಕುರ್ದೀಪ್ ರೇ ಹೇಳುತ್ತಾರೆ. ತಂಬಾಕು ಬಳಕೆ, ಅನಾರೋಗ್ಯಕರ ಆಹಾರ, ದೈಹಿಕ ನಿಷ್ಕ್ರಿಯತೆ, ಬೊಜ್ಜುತನ ಮತ್ತು ವಾಯು ಮಾಲಿನ್ಯ ಸೇರಿದಂತೆ ಪರಿಸರ ಸಮಸ್ಯೆಗಳು ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳ ಹೆಚ್ಚಳದ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ.

ಆರಂಭಿಕ ರೋಗನಿರ್ಣಯವು ಮುಖ್ಯ: 

ಕ್ಯಾನ್ಸರ್ ಎದುರಿಸಲು ಸರ್ಕಾರದ ಉಪಕ್ರಮಗಳ ಹೊರತಾಗಿಯೂ, ತರಬೇತಿ ಪಡೆದ ಆಂಕೊಲಾಜಿಸ್ಟ್‍ಗಳ ಕೊರತೆ ಮತ್ತು ಸೀಮಿತ ರೇಡಿಯೊಥೆರಪಿ ಸೌಲಭ್ಯಗಳು ಸವಾಲುಗಳನ್ನು ಒಡ್ಡುತ್ತವೆ ಎಂದು ಡಾ. ರೇ ದಿ ಪ್ರಿಂಟ್‍ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಭಾರತದಲ್ಲಿ ಶೇಕಡಾ 60 ರಿಂದ 70 ರಷ್ಟು ಪ್ರಕರಣಗಳಲ್ಲಿ ಕ್ಯಾನ್ಸರ್ ಕೊನೆಯ ಹಂತಗಳಲ್ಲಿ ಪತ್ತೆಯಾಗುತ್ತದೆ. ಇದು ರೋಗಿಗಳ ಮರಣ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಡಾ. ರೇ ಹೇಳಿದರು. ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಬಾಯಿಯ ಕ್ಯಾನ್ಸರ್‍ನ ಆರಂಭಿಕ ಪತ್ತೆಗಾಗಿ ಸ್ಕ್ರೀನಿಂಗ್ ಅನ್ನು ತೀವ್ರಗೊಳಿಸುವುದು, ಊPಗಿ ಲಸಿಕೆಯನ್ನು ವಿಸ್ತರಿಸುವುದು ಮತ್ತು ತಂಬಾಕು ನಿಯಂತ್ರಣ ಕಾರ್ಯಕ್ರಮಗಳನ್ನು ತೀವ್ರಗೊಳಿಸುವುದು ಎಂದು ವೈದ್ಯರು ಸೂಚಿಸುತ್ತಾರೆ.  







Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries