HEALTH TIPS

ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನ ಯು-ಟರ್ನ್

ನವದೆಹಲಿ:‌ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೋಗುತ್ತಿದ್ದ ಇಂಡಿಗೊ ವಿಮಾನವು ಸುಮಾರು ಏಳು ಗಂಟೆಗಳ ಕಾಲ ಹಾರಾಟ ನಡೆಸಿ, ಬಳಿಕ ಯು-ಟರ್ನ್ ಮಾಡಿ ರಾಷ್ಟ್ರ ರಾಜಧಾನಿಗೆ ವಾಪಸ್‌ ಆಗಿದೆ ಎಂದು ವರದಿಯಾಗಿದೆ.

ಇಂಡಿಗೊದ ಬೋಯಿಂಗ್ 787-9 ಡ್ರೀಮ್‌ಲೈನರ್, ಫ್ಲೈಟ್ 6E33, ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಹೊರಟಿತ್ತು.

ಆದರೆ ಇಥಿಯೋಪಿಯಾ ಮತ್ತು ಎರಿಟ್ರಿಯಾ ನಡುವಿನ ಗಡಿಯ ಬಳಿ ಹಠಾತ್‌ ಯು-ಟರ್ನ್ ಮಾಡಿ ದೆಹಲಿಗೆ ಮರಳಿದೆ.

ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ವಲಯಗಳನ್ನು ತಪ್ಪಿಸಲು ಬದಲಿ ಮಾರ್ಗದಲ್ಲಿ ತೆರಳುತ್ತಿದ್ದ ವಿಮಾನ ಸುಮಾರು ಏಳು ಗಂಟೆಗಳ ಕಾಲ ಹಾರಾಟ ನಡೆಸಿ ಬಳಿಕ ಯು-ಟರ್ನ್ ಆಗಿದೆ.

ಪಶ್ಚಿಮ ಏಷ್ಯಾದಲ್ಲಿನ ಸಕ್ರಿಯ ಸಂಘರ್ಷ ವಲಯವನ್ನು ತಪ್ಪಿಸಿ ಅದು ಬದಲಿ ಮಾರ್ಗದಲ್ಲಿ ತೆರಳುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಾಯು ಪ್ರದೇಶಕ್ಕೆ ನಿರ್ಬಂಧ ವಿಧಿಸಿದ ಕಾರಣ, ವಿಮಾನಯಾನ ಸಂಸ್ಥೆಯು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಇಂಡಿಗೊ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಮತ್ತು ಸುತ್ತಮುತ್ತಲಿನ ಪರಿಸ್ಥಿತಿಯಿಂದಾಗಿ ನಮ್ಮ ಕೆಲವು ವಿಮಾನಗಳು ಮಾರ್ಗ ಬದಲಿಸಬಹುದು. ಕೊನೆಯ ಕ್ಷಣದಲ್ಲಿ ವಾಯು ಪ್ರದೇಶದ ನಿರ್ಬಂಧ ವಿಧಿಸಿದ್ದರಿಂದ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಕಾರ್ಯಾಚರಿಸುತ್ತಿದ್ದ ಇಂಡಿಗೊ ವಿಮಾನ 6E33 ಅದರ ಮೂಲ ಸ್ಥಳಕ್ಕೆ ಹಿಂತಿರುಗಬೇಕಾಯಿತು ಎಂದೂ ವಕ್ತಾರರು ಹೇಳಿದ್ದಾರೆ.

ಪ್ರಯಾಣ ಪುನರಾರಂಭದ ಬಗ್ಗೆ ವಿಮಾನಯಾನ ಸಂಸ್ಥೆಯು ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮಗೆ ಮೊದಲ ಆದ್ಯತೆ ಎಂದೂ ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries