ಇಂಫಾಲ್: ಮಣಿಪುರದ ಕಾಮ್‌ಜೋಂಗ್ ಜಿಲ್ಲೆಯಲ್ಲಿ, ನಿಷೇಧಿತ ಸಂಘಟನೆ ಎನ್‌ಎಸ್‌ಸಿಎನ್‌ಗೆ ಸೇರಿದ ನಾಲ್ಕು ಮಂದಿಯನ್ನು ಮತ್ತೊಂದು ಬಂಡುಕೋರರ ಸಂಘಟನೆಯ ಸದಸ್ಯರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಶನಿವಾರ ರಾತ್ರಿ 9 ಗಂಟೆಗೆ ಘಟನೆ ನಡೆದಿದೆ.
ಬಳಿಕ ಸ್ಥಳದಲ್ಲಿ ಪರಿಶೀಲನೆ ನಡೆಸಿ ಭಾನುವಾರ ಮುಂಜಾನೆ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
'ನಮ್ಮ ಆರು ಕಾರ್ಯಕರ್ತರಿದ್ದ ವಾಹನವನ್ನು ತಡೆದು, ಗುಂಡು ಹಾರಿಸಲಾಗಿದೆ. ಇಬ್ಬರು ಪಾರಾಗಿದ್ದಾರೆ' ಎಂದು ಎನ್‌ಎಸ್‌ಸಿಎನ್ ಹೇಳಿದೆ.

