HEALTH TIPS

ಮಧ್ಯಪ್ರಾಚ್ಯ ಸಂಘರ್ಷ | ಇರಾನ್‌ ನಲ್ಲಿ ಭೂಸೇನೆ ಕಾರ್ಯಾಚರಣೆಗಳಿಗೆ ಪೆಂಟಗನ್ ಸಿದ್ಧತೆ: ವರದಿ

ವಾಷಿಂಗ್ಟನ್: ಇರಾನ್‌ ನಲ್ಲಿ ಭೂಸೇನೆ ಕಾರ್ಯಾಚರಣೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ.

ಖಾರ್ಗ್ ದ್ವೀಪ ಹಾಗೂ ಹಾರ್ಮುಝ್ ಜಲಸಂಧಿ ಸಮೀಪದ ಕರಾವಳಿ ಪ್ರದೇಶಗಳ ಮೇಲೆ ದಾಳಿಗಳನ್ನು ಒಳಗೊಂಡಂತೆ, ಹಲವು ವಾರಗಳ ಕಾಲ ಮುಂದುವರಿಯಬಹುದಾದ ಭೂಸೇನೆ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪೆಂಟಗನ್ ಸಿದ್ಧಪಡಿಸುತ್ತಿದೆ ಎಂದು ʼವಾಷಿಂಗ್ಟನ್ ಪೋಸ್ಟ್ʼ ಶನಿವಾರ (ಮಾರ್ಚ್ 28, 2026) ವರದಿ ಮಾಡಿದೆ.

ಆದರೆ ಈವರೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ನಿಯೋಜನೆಗೆ ಅನುಮೋದನೆ ನೀಡಿಲ್ಲ ಎಂದು ವರದಿ ತಿಳಿಸಿದೆ.

ಯಾವುದೇ ಭೂಸೇನೆ ಕಾರ್ಯಾಚರಣೆ ಪೂರ್ಣ ಪ್ರಮಾಣದ ಆಕ್ರಮಣವಾಗಿರುವುದಿಲ್ಲ. ಬದಲಿಗೆ ವಿಶೇಷ ಕಾರ್ಯಾಚರಣೆ ಪಡೆಗಳು ಹಾಗೂ ಸಾಂಪ್ರದಾಯಿಕ ಪದಾತಿ ದಳಗಳನ್ನು ಬಳಸಿ ನಿರ್ದಿಷ್ಟ ಗುರಿಗಳ ಮೇಲೆ ದಾಳಿ ನಡೆಸುವ ಕ್ರಮಗಳನ್ನು ಒಳಗೊಂಡಿರುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಶುಕ್ರವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು, "ಭೂ ಪಡೆಗಳಿಲ್ಲದೆ ನಮ್ಮ ಎಲ್ಲಾ ಉದ್ದೇಶಗಳನ್ನು ಸಾಧಿಸಬಹುದು" ಎಂದು ಆಗ್ರಹಿಸಿದ್ದರು. ಆದರೂ, ಭೂಸೈನಿಕ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಯೋಜನೆಗಳು ಮುಂದುವರೆದಿದ್ದು, "ಇದು ಕೊನೆಯ ಕ್ಷಣದ ಯೋಜನೆ ಅಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries