HEALTH TIPS

ಇರಾನ್‌ಗೂ ಕೈಕೊಡ್ತಾ ಚೀನಾದಿಂದ ಖರೀದಿಸಿದ ಏರ್‌ ಡಿಫೆನ್ಸ್‌ ಸಿಸ್ಟಂ? ವೈಮಾನಿಕ ದಾಳಿ ಬಳಿಕ ಮೂಡಿತು ಅನುಮಾನ

ಟೆಹರಾನ್‌: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಘಟಿತ ವಾಯುದಾಳಿಗಳಲ್ಲಿ ಇರಾನಿನ ನಗರಗಳಲ್ಲಿ ನಡೆದ ಸಾಮೂಹಿಕ ವಿನಾಶವು ಸ್ಫೋಟಕಗಳನ್ನು ತಡೆಯುವಲ್ಲಿ ಟೆಹರಾನ್‌ನ ವಾಯು ರಕ್ಷಣಾ ವ್ಯವಸ್ಥೆಯ ವೈಫಲ್ಯವನ್ನು ಬೆಳಕಿಗೆ ತಂದಿದೆ.

ಚೀನಾದಿಂದ ಇತ್ತೀಚೆಗೆ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯ ಹೆಚ್ಚಿಸಲು ಖರೀದಿಸಿದ HQ-9B (China's HQ-9B) ವಾಯು ರಕ್ಷಣಾ ವ್ಯವಸ್ಥೆ ತನ್ನ ಕಾರ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎನ್ನುವುದನ್ನು ಸಾರಿ ಹೇಳಿದೆ.

ಇದಕ್ಕೂ ಮೊದಲು, ಭಾರತವು ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ ವೇಳೆ ಪಾಕಿಸ್ತಾನದಲ್ಲಿ ಗುರಿಗಳನ್ನು ಸಮರ್ಪಕವಾಗಿ ರಕ್ಷಿಸಲು HQ-9B ವಿಫಲವಾಗಿತ್ತು. ಇರಾನ್‌ನಲ್ಲಿಯೂ ಇದರ ದುರ್ಬಲ ಪ್ರದರ್ಶನದ ಹಿನ್ನೆಲೆ, HQ-9B ಸಾಮರ್ಥ್ಯದ ಬಗ್ಗೆ ಯುದ್ಧ ವಿಶ್ಲೇಷಕರು ಪ್ರಶ್ನೆಗಳನ್ನು ಎತ್ತಿದ್ದಾರೆ.

ವಾಯು ರಕ್ಷಣಾ ವ್ಯವಸ್ಥೆಯ ವೈಫಲ್ಯವು ಅದರ ದೋಷಗಳು ಮತ್ತು ಕೊರತೆಗಳನ್ನು ಸೂಚಿಸಬಹುದಾದರೂ, ಅಮೆರಿಕ ಮತ್ತು ಇಸ್ರೇಲ್‌ನ ಸಂಯುಕ್ತ ವಾಯುಶಕ್ತಿಯು HQ-9B ಆಧಾರಿತ ಮೂಲಸೌಕರ್ಯವನ್ನು ಮೀರಿಸಿಬಿಟ್ಟಿರುವ ಸಾಧ್ಯತೆ ಇದೆ. ಗಲ್ಫ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ಇದನ್ನು ತುರ್ತಾಗಿ ಸಿದ್ಧಪಡಿಸಿರುವ ಸಾಧ್ಯತೆಯಿದೆ.

HQ-9B ಹೇಗಿರುತ್ತದೆ?

ಚೀನಾ ಏರೋಸ್ಪೇಸ್ ಸೈನ್ಸ್ ಆಯಂಡ್‌ ಇಂಡಸ್ಟ್ರಿ ಕಾರ್ಪೊರೇಶನ್ ಅಭಿವೃದ್ಧಿಪಡಿಸಿದ HQ-9B, ರಷ್ಯಾದ S-300PMU ಮತ್ತು ಅಮೆರಿಕದ Patriot PAC-2 ವ್ಯವಸ್ಥೆಗಳಿಂದ ಪ್ರೇರಿತವಾಗಿದ್ದರೂ, ಸಂಪೂರ್ಣವಾಗಿ ಸ್ವದೇಶಿ ವಾಯು ರಕ್ಷಣಾ ವ್ಯವಸ್ಥೆಯಾಗಿ ಅಭಿವೃದ್ಧಿಯಾಗಿದೆ. ಇದನ್ನು ಮೊದಲು 2006ರಲ್ಲಿ ಪರೀಕ್ಷಿಸಲಾಗಿದ್ದು, ದಶಕದಿಂದ ಬಳಕೆಯಲ್ಲಿದೆ. ಇದರ ವ್ಯಾಪ್ತಿ 260 ಕಿಲೋ ಮೀಟರ್ ಆಗಿದ್ದು, ಇನ್ನೂ ಹೆಚ್ಚು 50 ಕಿಲೋ ಮೀಟರ್ ಎತ್ತರಕ್ಕೆ ಏರಿ ಕ್ಷಿಪಣಿಗಳನ್ನು ಹೊಡೆದುರುಳಿಸಲು ಸಾಮರ್ಥ್ಯ ಹೊಂದಿದೆ.

ಆಕ್ಟಿವ್ ರಡಾರ್ ಹೋಮಿಂಗ್ ಮತ್ತು ಪ್ಯಾಸಿವ್ ಇನ್ಫ್ರಾರೆಡ್ ಸೀಕರ್ ವೈಶಿಷ್ಟ್ಯಗಳು ಇದನ್ನು ಸ್ಟೆಲ್ತ್ ವಿಮಾನಗಳ ವಿರುದ್ಧ ಪರಿಣಾಮಕಾರಿಯಾಗಿಸುತ್ತವೆ. HQ-9B ಏಕಕಾಲದಲ್ಲಿ 6-8 ಗುರಿಗಳನ್ನು ಗುರಿಯಾಗಿಸಿಕೊಳ್ಳಬಹುದು ಮತ್ತು 100 ಗುರಿಗಳವರೆಗೆ ಟ್ರ್ಯಾಕ್ ಮಾಡಬಹುದು.

HQ-9B ಅನ್ನು ಬೀಜಿಂಗ್, ಟಿಬೆಟ್ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಇವೆಲ್ಲವೂ ಚೀನಾದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ನಿರ್ಣಾಯಕವಾಗಿವೆ. ಇದರಿಂದ ಈ ಸರ್ಫೇಸ್-ಟು-ಏರ್ ಕ್ಷಿಪಣಿ ವ್ಯವಸ್ಥೆ ಚೀನಾದ ವಾಯು ರಕ್ಷಣಾ ಜಾಲದ ಪ್ರಮುಖ ಆಧಾರವಾಗಿದೆ.

ಅಂದಹಾಗೆ, ಇರಾನ್‍ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಇರಾನ್ ತನ್ನ ಭದ್ರತಾ ಶಸ್ತ್ರಾಗಾರವನ್ನು ಹೆಚ್ಚಿಸಿಕೊಳ್ಳಲು ಪ್ರಾರಂಭಿಸಿತು. ಚೀನಾದೊಂದಿಗಿನ ತೈಲಕ್ಕಾಗಿ ಶಸ್ತ್ರಾಸ್ತ್ರ ಒಪ್ಪಂದದ ಭಾಗವಾಗಿ ಇರಾನ್ HQ-9B ಅನ್ನು ಖರೀದಿಸಿದೆ ಎಂದು ತಿಳಿದುಬಂದಿದೆ.

2025ರ ಸಂಘರ್ಷದ ವೇಳೆ ರಷ್ಯಾದ S-300PMU-2 ಇಸ್ರೇಲ್ ಕ್ಷಿಪಣಿಗಳ ವಿರುದ್ಧ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ನಂತರ, ಇದು ಇರಾನ್‌ಗೆ ಪ್ರಮುಖ ಅಪ್‌ಗ್ರೇಡ್ ಆಗಿತ್ತು. ವರದಿಗಳ ಪ್ರಕಾರ, HQ-9B ದೀರ್ಘ ವ್ಯಾಪ್ತಿಯ ರಕ್ಷಣಾ ಪದರವಾಗಿದ್ದು, S-300PMU-2 ಮತ್ತು Bavar-373 (ದೀರ್ಘ ವ್ಯಾಪ್ತಿ), Khordad-15 ಮತ್ತು Raad (ಮಧ್ಯಮ ವ್ಯಾಪ್ತಿ) ಹಾಗೂ Tor-M2, Pantsir-S1, Zolfaqar ಮತ್ತು ಟ್ಯಾಕ್ಟಿಕಲ್ MANPADS ಕ್ಷಿಪಣಿಗಳು (ಕಡಿಮೆ ವ್ಯಾಪ್ತಿ) ಇವುಗಳಿಂದ ಬೆಂಬಲಿತವಾಗಿತ್ತು. ಟೆಹರಾನ್‌ ಮತ್ತು ಇಸ್ಫಹಾನ್ ಬಳಿಯ ವಾಯುನೆಲೆಗಳಂತಹ ಪ್ರಮುಖ ನೆಲೆಗಳ ಸುತ್ತಲೂ HQ-9B ನಿಯೋಜಿಸಲಾಗಿತ್ತು.

ದಾಳಿಗಳು ಮತ್ತು ಪ್ರತಿದಾಳಿಗಳು ಮಧ್ಯಪ್ರಾಚ್ಯದ ಹೆಚ್ಚಿನ ಭಾಗಗಳ ಮೇಲೆ ಪರಿಣಾಮ ಬೀರಿವೆ. ಇದರಲ್ಲಿ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ವಿಮಾನ ನಿಲ್ದಾಣವನ್ನು ಮುಚ್ಚಬೇಕಾಯಿತು. ಶತ್ರುಗಳ ಜತೆ ಸೇರುವುದು ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂಬ ಬಲವಾದ ಸಂದೇಶವನ್ನು ಕಳುಹಿಸಲು ಇರಾನ್ ಅಮೆರಿಕದ ಮಿತ್ರರಾಷ್ಟ್ರಗಳಾದ ಕತಾರ್ ಮತ್ತು ಯುಎಇಯನ್ನು ಗುರಿಯಾಗಿಸಿಕೊಂಡು ಸಂಘರ್ಷವನ್ನು ವಿಸ್ತರಿಸಿದೆ.

ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟಿದ್ದು, ಸೇಡು ತೀರಿಸಿಕೊಳ್ಳಲು ಇತಿಹಾಸದಲ್ಲಿ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆ ನಡೆಸುವುದಾಗಿ ಟೆಹರಾನ್‌ ಪ್ರತಿಜ್ಞೆ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries