HEALTH TIPS

ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ನೂತನ ಗೋಶಾಲೆಗೆ ಗೋವುಗಳ ಪ್ರವೇಶ

ಬದಿಯಡ್ಕ: ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ವಸುದೈವ ಕುಟುಂಬಕಂ ಗೋಪ್ರಿಯರು ಗೋವಿಂದ ಪುಣ್ಯಕೋಟಿ ಗೋಶಾಲೆ ಇದರ ಪ್ರವೇಶೋತ್ಸವ ಬುಧವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಜರಗಿತು. ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಗೋವುಗಳಿಗೆ ಪೂಜೆಯನ್ನು ಸಲ್ಲಿಸಿ ಅರ್ಚಕರ ನೇತೃತ್ವದಲ್ಲಿ ಪ್ರದಕ್ಷಿಣೆಯೊಂದಿಗೆ ಗೋವುಗಳನ್ನು ಗೋಶಾಲೆಗೆ ಶ್ರದ್ಧಾಭಕ್ತಿಯಿಂದ ಬರಮಾಡಿಕೊಳ್ಳಲಾಯಿತು. ಗೋಪೂಜೆಯನ್ನು ಸಲ್ಲಿಸಿ ಗೋಗ್ರಾಸ ನೀಡಲಾಯಿತು.  


ಪ್ರಮುಖರಾದ ಗೋಪಾಲಕೃಷ್ಣ ಪೈ ಬದಿಯಡ್ಕ, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಆಡಳಿತ ಮೊಕ್ತೇಸರ ಪ್ರತಾಪ್ ರೈ ನೆಕ್ರಾಜೆ, ಆಡಳಿತ ಸೇವಾಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿ ಗಣೇಶ ವತ್ಸ ನೆಕ್ರಾಜೆ, ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್ ಕೊಡಾಕೊಳ್ಳು, ಉಪಾಧ್ಯಕ್ಷ ನಿತ್ಯಾನಂದ ನೆಲ್ಲಿತ್ತಲ, ಗೋಶಾಲೆ ಸಮಿತಿಯ ಗೌರವಾಧ್ಯಕ್ಷ ರಾಮಚಂದ್ರ ಬಲ್ಲಾಳ್ ನೆಕ್ರಾಜೆ, ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ ನೆಕ್ರಾಜೆ, ಕೋಶಾಧಿಕಾರಿ ರಮೇಶ್ ಮಾವಿನಕಟ್ಟೆ, ಭಗವದ್ಭಕ್ತರು ಪಾಲ್ಗೊಂಡಿದ್ದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನೆಕ್ರಾಜೆ ಗೋವುಗಳನ್ನು ಉದಾರವಾಗಿ ನೀಡಿದ್ದರು. ಊರಿನ ಹಾಗೂ ಪರವೂರ ಭಗವದ್ಭಕ್ತರ ಹಾಗೂ ಗೋಪ್ರೇಮಿಗಳ ಸಹಕಾರದೊಂದಿಗೆ ಗೋಶಾಲೆ ನಿರ್ಮಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries