HEALTH TIPS

ಇರಾನ್‍ನ ನತಾಂಝ್ ಪರಮಾಣು ಸ್ಥಾವರದ ಮೇಲೆ ದಾಳಿ; ವಿಕಿರಣ ಸೋರಿಕೆಯಾಗಿಲ್ಲ ಎಂದ ಇರಾನ್

ಟೆಹರಾನ್: ಇರಾನ್‍ನ ನತಾಂಝ್ ಪರಮಾಣು ಸಂವರ್ಧನೆ ಸೌಲಭ್ಯದ ಮೇಲೆ ಶನಿವಾರ ವೈಮಾನಿಕ ದಾಳಿ ನಡೆದಿದೆ. ಆದರೆ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಮಿಝಾನ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಇರಾನ್‍ನ ಪ್ರಾಥಮಿಕ ಅಣುಶಕ್ತಿ ಸಂವರ್ಧನಾ ಸೌಲಭ್ಯವಾಗಿರುವ ನತಾಂಝ್ ಮೇಲೆ ಯುದ್ಧದ ಆರಂಭದಲ್ಲೇ ದಾಳಿ ನಡೆದಿತ್ತು ಮತ್ತು ಹಲವು ಕಟ್ಟಡಗಳು ಹಾನಿಗೊಂಡಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿತ್ತು.

ದಾಳಿಯಿಂದ ಯಾವುದೇ ವಿಕಿರಣ ಸಮಸ್ಯೆ ಕಂಡುಬಂದಿಲ್ಲ ಎಂದು ಆಗ ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಹೇಳಿತ್ತು.

ಟೆಹ್ರಾನ್‍ನ ಆಗ್ನೇಯಕ್ಕೆ ಸುಮಾರು 220 ಕಿ.ಮೀ ದೂರವಿರುವ ಸೌಲಭ್ಯದ ಮೇಲೆ ಈ ಹಿಂದೆಯೂ ಹಲವು ಬಾರಿ ದಾಳಿ ನಡೆದಿತ್ತು. 2015ರ ಇರಾನ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ದಾಳಿ ನಡೆದಿರುವುದನ್ನು ಇರಾನ್‍ನ ಪರಮಾಣು ಸಂಸ್ಥೆ ದೃಢೀಕರಿಸಿದೆ. ಆದರೆ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಮತ್ತು ಸೌಲಭ್ಯದ ಸುತ್ತಮುತ್ತಲಿನ ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ. ನತಾಂಝ್ ಸೌಲಭ್ಯದ ವಿರುದ್ಧ ಅಮೆರಿಕ ಬಂಕರ್ ಬಸ್ಟರ್ ಬಾಂಬ್‍ಗಳನ್ನು ಪ್ರಯೋಗಿಸಿರುವುದಾಗಿ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ, ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸಲು ಪರಿಗಣಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶನಿವಾರ ಬೆಳಿಗ್ಗೆ ಇರಾನ್ ಸರಣಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ಪೂರ್ವ ವಲಯದಲ್ಲಿ ಪ್ರಮುಖ ತೈಲ ಮೂಲಸೌಕರ್ಯವನ್ನು ಗುರಿಯಾಗಿಸಿ ಇರಾನ್ ಪ್ರಯೋಗಿಸಿದ ಸುಮಾರು 20 ಡ್ರೋನ್‍ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೆಬಿಯಾ ಶನಿವಾರ ಹೇಳಿದೆ.

ಪಶ್ಚಿಮ ಇರಾನ್: ಕ್ಷಿಪಣಿ ದಾಳಿಯಲ್ಲಿ ಮಗು ಮೃತ್ಯು

ನೈಋತ್ಯ ಖಜೆಸ್ತಾನ್ ಪ್ರಾಂತದ ಅಹ್ವಾಜ್ ನಗರದ ಮೇಲೆ ಇಸ್ರೇಲ್, ಅಮೆರಿಕ ಪಡೆಗಳ ವೈಮಾನಿಕ ದಾಳಿಯಲ್ಲಿ ಮಗುವೊಂದು ಸಾವನ್ನಪ್ಪಿದ್ದು ಮಗುವಿನ ಪೋಷಕರು ಗಾಯಗೊಂಡಿರುವುದಾಗಿ ಇರಾನ್‍ನ ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಪೂರ್ವ ಇರಾನ್‍ನ ಅಘಾಜರಿ ನಗರದ ವಸತಿ ಗೃಹವನ್ನು ಗುರಿಯಾಗಿಸಿ ಮತ್ತೊಂದು ದಾಳಿ ನಡೆದಿದ್ದು ಸಾವು-ನೋವಿನ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಿಲಿಟರಿ ಸಂಯಮಕ್ಕೆ ವಿಶ್ವಸಂಸ್ಥೆ ಕರೆ:

ಅಮೆರಿಕ ಮತ್ತು ಇಸ್ರೇಲ್‍ನೊಂದಿಗಿನ ಯುದ್ಧದಲ್ಲಿ ನತಾಂಝ್ ಪರಮಾಣು ಸ್ಥಳದ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ಸಲ್ಲಿಸಿದ ವರದಿಯನ್ನು ಪರಿಶೀಲಿಸುತ್ತಿರುವುದಾಗಿ ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿ `ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ( ಐಎಇಎ) ಶನಿವಾರ ಹೇಳಿದೆ.

ಪರಮಾಣು ದುರಂತದ ಯಾವುದೇ ಅಪಾಯವನ್ನು ತಪ್ಪಿಸಲು ಮಿಲಿಟರಿ ಸಂಯಮದ ಕರೆಯನ್ನು ಐಎಇಎ ಮುಖ್ಯಸ್ಥ ರಾಫೆಲ್ ಗ್ರಾಸ್ಸಿ ಪುನರುಚ್ಚರಿಸಿದ್ದಾರೆ ಎಂದು ಐಎಇಎ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಪರಮಾಣು ಸ್ಥಳದ ಮೇಲಿನ ದಾಳಿಯು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರಷ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಖಂಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries