HEALTH TIPS

ಇಸ್ರೇಲ್‌ ದಾಳಿಯಲ್ಲಿ IRGC ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಮೃತ್ಯು: ವರದಿ

ಜೆರುಸಲೇಂ: ಹಾರ್ಮುಜ್ ಜಲಸಂಧಿಯ ಬಳಿಯಿರುವ ಇರಾನ್‍ನ ಪ್ರಮುಖ ಬಂದರು `ಬಂದರ್ ಅಬ್ಬಾಸ್'ನ ಮೇಲೆ ನಡೆದ ದಾಳಿಯಲ್ಲಿ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ)ನ ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಹತರಾಗಿರುವುದಾಗಿ ಇಸ್ರೇಲಿ ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ಜೆರುಸಲೇಮ್ ಪೋಸ್ಟ್' ಗುರುವಾರ ವರದಿ ಮಾಡಿದೆ.

ಬುಧವಾರ ರಾತ್ರಿ ಐಆರ್‍ಜಿಸಿ ನೌಕಾಪಡೆಯ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿ ನಿಖರ ಕಾರ್ಯಾಚರಣೆ ನಡೆಸಲಾಗಿದ್ದು ಹಾರ್ಮುಜ್ ಜಲಸಂಧಿಯನ್ನು ಹಡಗು ಸಾಗಣೆಗೆ ತಡೆಯುವ ಭಯೋತ್ಪಾದಕ ಕಾರ್ಯಾಚರಣೆಗೆ ನೇರ ಹೊಣೆಗಾರನಾಗಿದ್ದ ವ್ಯಕ್ತಿಯನ್ನು ನಿರ್ಮೂಲನೆ ಮಾಡಲಾಗಿದೆ' ಎಂದು ಇಸ್ರೇಲ್‍ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್‌ ಗುರುವಾರ ಹೇಳಿಕೆ ನೀಡಿದ್ದಾರೆ.

ಬಂದರ್ ಅಬ್ಬಾಸ್ ಪರ್ಷಿಯನ್ ಕೊಲ್ಲಿಯನ್ನು ಜಾಗತಿಕ ಹಡಗು ಮಾರ್ಗಗಳಿಗೆ ಸಂಪರ್ಕಿಸುವ ಕಾರ್ಯತಂತ್ರದ ಹಾರ್ಮುಜ್ ಜಲಸಂಧಿಯ ಪಕ್ಕದಲ್ಲಿದೆ. ವಿಶೇಷವಾಗಿ ಇರಾನ್‍ನ ಕಡಲ ಕಾರ್ಯಾಚರಣೆಯಲ್ಲಿ ಐಆರ್‍ಜಿಸಿ ನೌಕಾಪಡೆಯ ಕೇಂದ್ರಪಾತ್ರ ಮತ್ತು ಕೊಲ್ಲಿಯಲ್ಲಿ ಅದರ ಕಾರ್ಯತಂತ್ರದ ನಿಲುವಿನ ಹಿನ್ನೆಲೆಯಲ್ಲಿ ತಂಗ್ಸಿರಿ ಹತ್ಯೆಯು ಸಂಘರ್ಷದಲ್ಲಿ ಮಹತ್ವದ ಬೆಳವಣಿಗೆಯನ್ನು ಸೂಚಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries