HEALTH TIPS

ಭಾರತದ ಮಾರ್ಗದರ್ಶನ ಉಪಗ್ರಹ ವ್ಯವಸ್ಥೆಗೆ ಭಾರೀ ಹಿನ್ನಡೆ: ಕಾರ್ಯನಿರತ ನಾಲ್ಕು IRNSS ಉಪಗ್ರಹಗಳಲ್ಲೊಂದು ವಿಫಲ; ವರದಿ

 ನವದೆಹಲಿಭಾರತದ ಸ್ವದೇಶಿ ಮಾರ್ಗದರ್ಶನ ಉಪಗ್ರಹ ವ್ಯವಸ್ಥೆ 'ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್‌ಸ್ಟೆಲೇಷನ್ (NavIC)' ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಇಸ್ರೋ ಅಧಿಕಾರಿಗಳ ಪ್ರಕಾರ ಅದರ ಕಾರ್ಯಾಚರಣಾ ಉಪಗ್ರಹಗಳ ಪೈಕಿ ಒಂದು ಉಡಾವಣೆಗೊಂಡ ಹತ್ತು ವರ್ಷಗಳ ಅಂತ್ಯದಲ್ಲಿ ವಿಫಲಗೊಂಡಿದೆ ಎಂದು indianexpress.com ವರದಿ ಮಾಡಿದೆ. 


ಮಾ.10,2016ರಂದು ಉಡಾವಣೆಗೊಂಡಿದ್ದ ಭಾರತೀಯ ಪ್ರಾದೇಶಿಕ ಮಾರ್ಗದರ್ಶನ ಉಪಗ್ರಹ ವ್ಯವಸ್ಥೆಯ IRNSS-1Fನ ಕಾರ್ಯನಿರ್ವಹಿಸುತ್ತಿದ್ದ ಕೊನೆಯ ಅಟಾಮಿಕ್ ಗಡಿಯಾರ ಕೂಡ ನಿಂತಿದೆ ಎಂದು ಬಾಹ್ಯಾಕಾಶ ಇಲಾಖೆಯ ಮೂಲಗಳು ಸೂಚಿಸಿವೆ. ಉಪಗ್ರಹವು ಮೂರು ಅಟಾಮಿಕ್ ಗಡಿಯಾರಗಳನ್ನು ಹೊಂದಿದ್ದರೂ ಕೆಲವು ಸಮಯದಿಂದ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು.

NavIC ವ್ಯವಸ್ಥೆಯು ಸಾರ್ವಜನಿಕರಿಗೆ ಮತ್ತು ರೈಲ್ವೆ, ಮಿಲಿಟರಿಯಂತಹ ಸರಕಾರಿ ಸಂಸ್ಥೆಗಳಿಗೆ ಸೇವೆಗಳನ್ನು ಒದಗಿಸಲು ಕನಿಷ್ಠ ನಾಲ್ಕು ಸ್ವದೇಶಿ ಮಾರ್ಗದರ್ಶನ ಉಪಗ್ರಹಗಳು ಸಂಪೂರ್ಣವಾಗಿ ಕಾರ್ಯಾಚರಿಸುತ್ತಿರಬೇಕು.

ಮಾ.13, 2026ರಂದು IRNSS-1Fನ ಕೊನೆಯ ಅಟಾಮಿಕ್ ಗಡಿಯಾರ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದೆ, ಆದಾಗ್ಯೂ ಉಪಗ್ರಹವು ಕಕ್ಷೆಯಲ್ಲಿ ಕಾರ್ಯ ನಿರ್ವಹಣೆಯನ್ನು ಮುಂದುವರಿಸಲಿದೆ ಮತ್ತು ಏಕಮುಖ ಪ್ರಸಾರ ಸಂದೇಶ ಸೇವೆಗಳನ್ನು ಒದಗಿಸಲಿದೆ. ಮಾ.2016ರಲ್ಲಿ ಉಡಾವಣೆಗೊಂಡಿದ್ದ ಈ ಉಪಗ್ರಹವು 10,ಮಾ.2026ರಂದು ತನ್ನ ಜೀವಿತಾವಧಿಯನ್ನು ಪೂರ್ಣಗೊಳಿಸಿದೆ ಎಂದು ಇಸ್ರೋ ಶುಕ್ರವಾರ ರಾತ್ರಿ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಭಾರತವು ಜು.2013ರಿಂದ ಸುಮಾರು 2,250 ಕೋಟಿ ರೂ.ವೆಚ್ಚದ NavIC ವ್ಯವಸ್ಥೆಗಾಗಿ 11 ಉಪಗ್ರಹಗಳನ್ನು ಉಡಾವಣೆಗೊಳಿಸಿತ್ತು. ಈ ಪೈಕಿ ಆರು ಉಪಗ್ರಹಗಳು ಆರಂಭಿಕ ವರ್ಷಗಳಲ್ಲಿ ಆಮದು ಮಾಡಿಕೊಂಡ ಅಟಾಮಿಕ್ ಗಡಿಯಾರಗಳಲ್ಲಿನ ದೋಷಗಳಿಂದಾಗಿ ಮತ್ತು ಇತ್ತೀಚಿಗೆ ಕೆಲವು ಉಪಗ್ರಹಗಳು ಕಕ್ಷೆ ಸಮಸ್ಯೆಗಳಿಂದಾಗಿ ವಿಫಲಗೊಂಡಿದ್ದವು. ಈಗ ಮೂರು ಉಪಗ್ರಹಗಳು ಮಾತ್ರ ಸೇವೆಗಳನ್ನು ಒದಗಿಸುತ್ತಿವೆ.

ಇಸ್ರೋ ಈಗ NavICವ್ಯವಸ್ಥೆಯನ್ನು ಬಲಗೊಳಿಸಲು ಮೂರು ಎರಡನೇ ತಲೆಮಾರಿನ ಎನ್‌ವಿಎಸ್-03/04/05 ಉಪಗ್ರಹಗಳ ಉಡಾವಣೆಯನ್ನು ಯೋಜಿಸಿದೆ. ಈ ಉಪಗ್ರಹಗಳು NavIC ವ್ಯವಸ್ಥೆಯ ಸೇವೆಯನ್ನು ಮುಂದುವರಿಸುವ ಮತ್ತು ಹೆಚ್ಚು ಸುಧಾರಿತ ತಂತ್ರಜ್ಞಾನವನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries