HEALTH TIPS

2018ರ #MeToo ಆರೋಪಗಳ ನಡುವೆಯೇ ವೈರಮುತ್ತುಗೆ ಜ್ಞಾನಪೀಠ: ಗಾಯಕಿ ಚಿನ್ಮಯಿ ಶ್ರೀಪಾದ ಆಕ್ಷೇಪ

 ಚೆನ್ನೈ: ಗೀತರಚನೆಕಾರ ಆರ್. ವೈರಮುತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಗಾಯಕಿ ಚಿನ್ಮಯಿ ಶ್ರೀಪಾದ ತಮಿಳು ಚಿತ್ರರಂಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಹೊರಬಂದ ಲೈಂಗಿಕ ದುರ್ನಡತೆಯ ಆರೋಪಗಳನ್ನು ಪುನಃ ಉಲ್ಲೇಖಿಸಿ, ಹಿರಿಯ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ನೇರವಾಗಿ ಟೀಕಿಸಿದ್ದಾರೆ.


ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಪ್ರತಿಕ್ರಿಯಿಸಿದ ಚಿನ್ಮಯಿ, "2018ರಲ್ಲಿ ವಿವಿಧ ವಯೋಮಾನದ ಅನೇಕ ಮಹಿಳೆಯರು ಒಬ್ಬ ಕವಿ-ಗೀತರಚನೆಕಾರನನ್ನು ತಮ್ಮ ಕಿರುಕುಳ ನೀಡಿದ ವ್ಯಕ್ತಿ ಎಂದು ಹೆಸರಿಸಿದ್ದರು. ಇಂದು ಅದೇ ವ್ಯಕ್ತಿಗೆ ಜ್ಞಾನಪೀಠ ನೀಡಲಾಗುತ್ತಿದೆ. ಆತನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಸಾಮೂಹಿಕ ಧ್ವನಿಯನ್ನು ಮೌನಗೊಳಿಸಲಾಗಿದೆ. ನಾನು ಇದಕ್ಕಾಗಿ ಭಾರೀ ಬೆಲೆ ತೆತ್ತಿದ್ದೇನೆ; ತಮ್ಮ ಕನಸುಗಳನ್ನು ಬಿಟ್ಟು ಬಂದ ಉಳಿದ ಮಹಿಳೆಯರು ನನ್ನಷ್ಟು ಅದೃಷ್ಟವಂತರಾಗಿರಲಿಲ್ಲ," ಎಂದು ಹೇಳಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ತಮಿಳು ಚಿತ್ರರಂಗದಲ್ಲಿ ಹೊಣೆಗಾರಿಕೆಯ ಕೊರತೆಯನ್ನು ಅವರು ಉಲ್ಲೇಖಿಸಿದ್ದಾರೆ. "ರಾಜಕೀಯದಲ್ಲಿರುವ ಪ್ರಭಾವಿ ಪುರುಷರು 17 ಮಹಿಳೆಯರು ಹೆಸರಿಸಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಹೊಗಳುತ್ತಿದ್ದಾರೆ. ಎಪ್ಸ್ಟೀನ್ ಪ್ರಕರಣದ ಬಗ್ಗೆ ನಾಟಕ ಮಾಡುವುದು ನಿಲ್ಲಿಸಿ. ಭಾರತವೂ ತನ್ನದೇ ಆದ ಎಪ್ಸ್ಟೀನ್ ಪಟ್ಟಿಯನ್ನು ಹೊಂದಿರಬೇಕು; ಆದರೆ ಇಲ್ಲಿ ಎಲ್ಲರೂ ತಮ್ಮವರನ್ನು ರಕ್ಷಿಸಲು ಮುಂದಾಗುತ್ತಾರೆ," ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ವೈರಮುತ್ತು ಅವರನ್ನು ಅಭಿನಂದಿಸಿದ್ದಕ್ಕಾಗಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ಚಿನ್ಮಯಿ ನೇರವಾಗಿ ಪ್ರಶ್ನಿಸಿದ್ದಾರೆ. ಆರೋಪಗಳಿದ್ದರೂ ಪ್ರಭಾವಿ ಪುರುಷರು ತಮ್ಮ ಪರಿಚಿತರನ್ನೇ ಬೆಂಬಲಿಸುತ್ತಾರೆ ಎಂದು ಅವರು ಟೀಕಿಸಿದ್ದಾರೆ. "ಪುರುಷರು ತಮ್ಮ ಸಹೋದರರು, ಚಿಕ್ಕಪ್ಪ, ಅಪ್ಪಂದಿರು, ಸ್ನೇಹಿತರು ಮತ್ತು ಮಾರ್ಗದರ್ಶಕರ ಪರವಾಗಿ ನಿಲ್ಲುತ್ತಾರೆ. ಹಲವು ಮಹಿಳೆಯರು ಆಘಾತಕ್ಕೊಳಗಾದರೆ ಯಾರು ಕಾಳಜಿ ವಹಿಸುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಈ ಆರೋಪಗಳ ಕುರಿತು ತಾವು ಕಾನೂನು ಕ್ರಮ ಕೈಗೊಂಡಿದ್ದಾಗಿ ಚಿನ್ಮಯಿ ತಿಳಿಸಿದ್ದಾರೆ. 2019ರಲ್ಲಿ ಅವರು ವೈರಮುತ್ತು ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ (ಓಅW)ಕ್ಕೆ ಅಧಿಕೃತ ದೂರು ಸಲ್ಲಿಸಿ, ಪ್ರಕರಣದ ವಿಚಾರಣೆ ಮತ್ತು ನ್ಯಾಯಕ್ಕಾಗಿ ಸಹಾಯ ಕೋರಿದ್ದರು. ಆದರೆ ತಮಿಳು ಚಿತ್ರೋದ್ಯಮವು ಈ ದೂರುಗಳನ್ನು ಬಹುತೇಕ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದಾರೆ. ಕಿರುಕುಳದ ಗಂಭೀರತೆಯನ್ನು ಕಡಿಮೆ ಮಾಡುವ ರೀತಿಯ ವರದಿಗಳು ಹೊರಬಂದಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.

ಈ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡಿದ ಪರಿಣಾಮವಾಗಿ ಚಿನ್ಮಯಿ ವೈಯಕ್ತಿಕ ಹಾಗೂ ವೃತ್ತಿಪರವಾಗಿ ಹಿನ್ನಡೆಯನ್ನು ಎದುರಿಸಿದ್ದಾರೆ. ನಟ ರಾಧಾ ರವಿ ಸೇರಿದಂತೆ ಹಿರಿಯರ ವಿರುದ್ಧ ಆರೋಪ ಮಾಡಿದ ಮಹಿಳೆಯರನ್ನು ಬೆಂಬಲಿಸಿದ ಬಳಿಕ, ಅವರನ್ನು ದಕ್ಷಿಣ ಭಾರತೀಯ ಚಲನಚಿತ್ರ, ದೂರದರ್ಶನ ಕಲಾವಿದರು ಮತ್ತು ಡಬ್ಬಿಂಗ್ ಕಲಾವಿದರ ಒಕ್ಕೂಟ (SIಅಖಿಂಆಂU)ದಿಂದ ಹೊರ ಹಾಕಲಾಗಿತ್ತು.

ಆರೋಪ ಎದುರಿಸಿದ ಪುರುಷರು ಯಾವುದೇ ಪರಿಣಾಮವಿಲ್ಲದೆ ತಮ್ಮ ಗೌರವ ಮತ್ತು ಸ್ಥಾನವನ್ನು ಮುಂದುವರಿಸಿಕೊಂಡಿದ್ದಾರೆ ಎಂದು ಚಿನ್ಮಯಿ ಹೇಳಿದ್ದಾರೆ. ಆದರೆ, ದುಷ್ಕೃತ್ಯಗಳನ್ನು ಬಹಿರಂಗಪಡಿಸಿದ ಮಹಿಳೆಯರು ಮಾತ್ರ ಪ್ರತೀಕಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಜುಲೈ 13, 1953ರಂದು ಜನಿಸಿದ ಆರ್. ವೈರಮುತ್ತು ತಮಿಳು ಸಾಹಿತ್ಯದ ಪ್ರಮುಖ ಗೀತರಚನೆಕಾರರಲ್ಲಿ ಒಬ್ಬರು. ಇತ್ತೀಚೆಗೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಚರ್ಚೆಗೆ ಕಾರಣವಾಗಿದೆ.

2018ರ #ಒeಖಿoo ಚಳುವಳಿಯ ವೇಳೆ ತಮಿಳು ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆ ಸಂದರ್ಭದಲ್ಲಿ ಮೊದಲಾಗಿ ಧ್ವನಿ ಎತ್ತಿದವರಲ್ಲಿ ಚಿನ್ಮಯಿ ಕೂಡ ಒಬ್ಬರು.

ಚಿನ್ಮಯಿ ಅವರ ಹೇಳಿಕೆಗಳು ಲಿಂಗಪಕ್ಷಪಾತ, ವ್ಯವಸ್ಥಾತ್ಮಕ ಅಧಿಕಾರದ ರಚನೆಗಳು ಮತ್ತು ದುರುಪಯೋಗವನ್ನು ಬಹಿರಂಗಪಡಿಸುವ ಮಹಿಳೆಯರು ಎದುರಿಸುವ ಅಪಾಯಗಳ ಕುರಿತು ಚರ್ಚೆಯನ್ನು ಮತ್ತೆ ತೀವ್ರಗೊಳಿಸಿವೆ.











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries