ಆಲಪ್ಪುಳ: 'ಹಾಲಿ ಶಾಸಕಿ, ಎಲ್‌ಡಿಎಫ್ ಅಭ್ಯರ್ಥಿ ಯು. ಪ್ರತಿಭಾ ಅವರು ಹ್ಯಾಟ್ರಿಕ್ ಗೆಲುವಿಗಾಗಿ, ತಮ್ಮ ವಾಕ್ಚಾತುರ್ಯ ಹಾಗೂ ಸೌಂದರ್ಯವನ್ನು ಮಾರಾಟ ಮಾಡುತ್ತಿದ್ದಾರೆ' ಎಂದು ಯುಡಿಎಫ್‌ನ ಮುಖಂಡರೊಬ್ಬರು ದೂರಿದ್ದಾರೆ.
ಭಾರತೀಯ ಯೂನಿಯನ್ ಮುಸ್ಲಿಂ ಲೀಗ್‌ನ (ಐಯುಎಂಎಲ್) ಮುಖಂಡರು ಹಾಗೂ ಕಾಯಂಕುಳಂನ ಯುಡಿಎಫ್ ಸಂಚಾಲಕರು ಆಗಿರುವ ಎ. ಇರ್ಷಾದ್ ಅವರು ಚುನಾವಣಾ ಪ್ರಚಾರದಲ್ಲಿ ಈ ಟೀಕೆ ಮಾಡಿದ್ದಾರೆ.
'ಕಾಯಂಕುಳಂ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಅಧಿಕಾರದ ಅವಧಿಯಲ್ಲಿ ಜನರಿಗಾಗಿ ಯಾವೊಂದು ಕೆಲಸ ಮಾಡಿಲ್ಲ' ಎಂದೂ ಆರೋಪಿಸಿದ್ದಾರೆ.
'ಪ್ರತಿಭಾ ಅವರು ಶಾಸಕರಾಗಿ ಪಡೆಯುವ ವಿವಿಧ ಅನುದಾನವನ್ನು ತಮ್ಮ ಮತಕ್ಷೇತ್ರದ ಪ್ರಯೋಜನಕ್ಕಾಗಿ ಬಳಸಿಕೊಳ್ಳುತ್ತಿಲ್ಲ. ಜನರ ಪ್ರತಿನಿಧಿಯಾಗಿ ಏನನ್ನೂ ಮಾಡಿಲ್ಲ' ಎಂದು ಐಯುಎಂಎಲ್ ನಾಯಕರು ದೂರಿದ್ದಾರೆ.

