HEALTH TIPS

Nepal Elections 2026: ಜೆನ್‌ ಝೀ ಕ್ರಾಂತಿಯ ನಂತರ ನೇಪಾಳದ ಸಂಸತ್ತಿಗೆ ಮತದಾನ

ಕಠ್ಮಂಡು: ಜೆನ್‌ ಝೀಗಳ ಕ್ರಾಂತಿಯ ನಂತರ ನೇಪಾಳದಲ್ಲಿ ಸಾರ್ವರ್ತಿಕ ಚುನಾವಣೆ ಗುರುವಾರ ಆರಂಭವಾಗಿದೆ.

ಪ್ರಧಾನಿಯಾಗಿದ್ದ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರದ ನಡೆಯ ವಿರುದ್ಧ ಕಳೆದ ಸೆಪ್ಟೆಂಬರ್‌ನಲ್ಲಿ ಯುವ ಸಮುದಾಯ ಬೀದಿಗಿಳಿದು ಹೋರಾಟ ನಡೆಸಿತ್ತು. ಇದರ ಪರಿಣಾಮ 77 ಜನರು ಮೃತಪಟ್ಟರು.

ಬುಗಿಲೆದ್ದ ಸಂಘರ್ಷದಿಂದಾಗಿ ಒಲಿ ಸರ್ಕಾರ ರಾಜೀನಾಮೆ ನೀಡಿತ್ತು. ಇದೀಗ ಹೊಸ ಸರ್ಕಾರ ರಚನೆಯ ಕಸರತ್ತು ಆರಂಭಗೊಂಡಿದೆ.

3 ಕೋಟಿ ಜನಸಂಖ್ಯೆ ಇರುವ ನೇಪಾಳದಲ್ಲಿ 1.9 ಕೋಟಿ ಮತದಾರರು ಇದ್ದಾರೆ. 275 ಸ್ಥಾನದ ಸಂಸತ್ತಿಗೆ 165 ಸಂಸದರು ನೇರವಾಗಿ ಆಯ್ಕೆಯಾಗುತ್ತಾರೆ. 110 ಸಂಸದರನ್ನು ಅನುಪಾತದ ಆಧಾರದ ಮೇಲೆ ಪ್ರಾತಿನಿಧಿಕವಾಗಿ ಆಯ್ಕೆ ಮಾಡಲಾಗುತ್ತದೆ.

ನೇಪಾಳದಲ್ಲಿ ಗುರುವಾರ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಯಿತು. ಮಧ್ಯಾಹ್ನದ ಹೊತ್ತಿಗೆ ಶೇ 18ರಷ್ಟು ಮತದಾನವಾಗಿತ್ತು ಎಂದು ವರದಿಯಾಗಿದೆ.

ಚುನಾವಣಾ ಕಣದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯೂನಿಫೈಡ್‌ ಮಾರ್ಕ್ಸಿಸ್ಟ್‌ ಲೆನಿನಿಸ್ಟ್‌) (ಸಿಪಿಎನ್‌-ಯುಎಂಎಲ್‌), ಶೇರ್ ಬಹದ್ದೂರ್ ದೇವಾ ಅವರ ನೇಪಾಳಿ ಕಾಂಗ್ರೆಸ್‌, ಪುಷ್ಪಾ ಕಮಲ್ ದಾಹಲ್‌ ಅವರ ಸಿಪಿಎನ್‌ (ಮಾಯಿಸ್ಟ್‌ ಸೆಂಟರ್‌) ಪಕ್ಷವಿದೆ.

ಇವುಗಳ ನಡುವೆ ಕಣದಲ್ಲಿರುವ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಹಾಗೂ ಅದರ ಅಭ್ಯರ್ಥಿ 35 ವರ್ಷದ ರ‍್ಯಾಪ್ ಗಾಯಕ ಬಾಲೇಂದ್ರ ಶಾಹ ಕೂಡಾ ಕಣದಲ್ಲಿ ಸದ್ದು ಮಾಡುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries