HEALTH TIPS

Pune | ಮಹಿಳೆಯ ಮೇಲೆ ನಾಯಿಗಳ ದಾಳಿ, ಛಿದ್ರವಿಚ್ಛಿದ್ರ ಮೃತದೇಹ ರಸ್ತೆಯಲ್ಲಿ ಪತ್ತೆ

ಪುಣೆ: ಪುಣೆ ನಗರದಲ್ಲಿ ಸೋಮವಾರ ಬೆಳಗಿನ ಜಾವ ನಾಯಿಗಳ ಗುಂಪೊಂದು 32ರ ಹರೆಯದ ಮಹಿಳೆಯ ಮೇಲೆ ದಾಳಿ ನಡೆಸಿದ್ದು, ಬೆಳಿಗ್ಗೆ ಛಿದ್ರವಿಚ್ಛಿದ್ರಗೊಂಡ ಆಕೆಯ ಮೃತದೇಹ ರಸ್ತೆಯಲ್ಲಿ ಪತ್ತೆಯಾಗಿದೆ.

ನಗರದ ಚಾಕಣ ಪ್ರದೇಶದಲ್ಲಿ ನಸುಕಿನ 2:15ರ ಸುಮಾರಿಗೆ ನಡೆದಿರುವ ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರರಿಂದ ಏಳು ನಾಯಿಗಳು ಬಿಳಿಸೀರೆಯನ್ನುಟ್ಟಿದ್ದ ಶೋಭಾ ವಾಘ್ಮಾರೆಯವರನ್ನು ಸುತ್ತುವರಿದಿದ್ದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸಿದೆ. ಆರಂಭದಲ್ಲಿ ಒಂದೆರಡು ನಾಯಿಗಳು ತನ್ನತ್ತ ಬಂದಾಗ ಆಕೆ ಅವುಗಳನ್ನು ಓಡಿಸಲು ಪ್ರಯತ್ನಿಸಿದ್ದರು. ಕೆಲವೇ ಸೆಕೆಂಡ್ ಗಳಲ್ಲಿ ಕನಿಷ್ಠ ಆರೇಳು ನಾಯಿಗಳು ಆಕೆಯನ್ನು ಸುತ್ತುವರಿದು ದಾಳಿ ಮಾಡತೊಡಗಿದ್ದವು.

ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದರಾದರೂ ಅದರಲ್ಲಿ ವಿಫಲಗೊಂಡಿದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಒಂದು ಹಂತದಲ್ಲಿ ಆಕೆಯ ಬಿಳಿಸೀರೆ ರಕ್ತದಲ್ಲಿ ತೋಯ್ದು ಕೆಂಬಣ್ಣಕ್ಕೆ ತಿರುಗಿತ್ತು. ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ದಾರಿಹೋಕರಿಗೆ ವಾಘ್ಮಾರೆಯವರ ಛಿದ್ರವಿಚ್ಛಿದ್ರ ಶವ ಕಂಡುಬಂದಿತ್ತು.

ಪೊಲೀಸರು ಆರಂಭದಲ್ಲಿ ಇದು ಕೊಲೆ ಎಂದು ಶಂಕಿಸಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ನಾಯಿಗಳ ದಾಳಿಯಿಂದ ಸಾವು ಸಂಭವಿಸಿದ್ದನ್ನು ದೃಢಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries