HEALTH TIPS

UPSC ವಿವಾದ: ಬೇರೆ ಬೇರೆ ರಾಜ್ಯಗಳ ಒಂದೇ ಹೆಸರಿನ ಇಬ್ಬರಿಗೆ 301ನೇ ರ‍್ಯಾಂಕ್‌!

ಪಟ್ನಾ: ಎರಡು ಬೇರೆ ಬೇರೆ ರಾಜ್ಯಗಳ ಒಂದೇ ಹೆಸರಿನ ಇಬ್ಬರು ಮಹಿಳೆಯರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಒಂದೇ ರ‍್ಯಾಂಕ್ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.

ಆಕಾಂಕ್ಷಾ ಸಿಂಗ್‌ ಹೆಸರಿನ ಇಬ್ಬರು ಮಹಿಳೆಯರು ಪಡೆದಿರುವ ರ‍್ಯಾಂಕ್ 301. ಇದೇ ವಿವಾದದ ಕೇಂದ್ರ ಬಿಂದುವಾಗಿದೆ.

ಈಗ ಇಬ್ಬರು ಅಭ್ಯರ್ಥಿಗಳು ಇದೇ ಸ್ಥಾನಕ್ಕಾಗಿ ಹಕ್ಕು ಮಂಡಿಸುತ್ತಿದ್ದಾರೆ.

ಒಂದೆಡೆ, ನಿಷೇಧಿತ ಸೇನಾಪಡೆ ರಣವೀರ್ ಸೇನಾದ ಸಂಸ್ಥಾಪಕ ಬ್ರಹ್ಮೇಶ್ವರ ಸಿಂಗ್ ಅವರ ಮೊಮ್ಮಗಳು, ಬಿಹಾರದ ಅರಾದ ಆಕಾಂಕ್ಷಾ ಸಿಂಗ್ 301 ರ‍್ಯಾಂಕ್‌ ಪಡೆದಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಉತ್ತರ ಪ್ರದೇಶದ ಘಾಜಿಪುರದ ಆಕಾಂಕ್ಷಾ ಸಿಂಗ್ ಎಂಬ ಮತ್ತೊಬ್ಬ ಅಭ್ಯರ್ಥಿ, ಇದೇ‌ ರ‍್ಯಾಂಕ್ ತನಗೆ ಸೇರಿದ್ದು ಎಂದು ಹೇಳಿಕೊಂಡಿದ್ದಾರೆ.

ಬ್ರಹ್ಮೇಶ್ವರ ಸಿಂಗ್‌ ಅವರನ್ನು 2012 ರಲ್ಲಿ ಹತ್ಯೆ ಮಾಡಲಾಗಿತ್ತು.

ರ‍್ಯಾಂಕ್‌ ವಿವಾದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮೇಶ್ವರ್ ಸಿಂಗ್ ಅವರ ಮೊಮ್ಮಗಳು ಆಕಾಂಕ್ಷಾ, '2025 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ, ನಾನು ಎರಡನೇ ಪ್ರಯತ್ನದಲ್ಲಿ 301ನೇ ರ‍್ಯಾಂಕ್ ಗಳಿಸಿದ್ದೇನೆ' ಎಂದು ಹೇಳಿಕೊಂಡಿದ್ದಾರೆ. 'ಈ ಬಾರಿ ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸ ನನಗಿತ್ತು. ಇದು ನನ್ನ ಅಜ್ಜನ ಕನಸಾಗಿತ್ತು. ಅವರು ನನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದರು' ಎಂದು ಅವರು ಹೇಳಿದರು.

ಗಾಜಿಪುರದ ಮತ್ತೊಬ್ಬ ಅಭ್ಯರ್ಥಿ ಆಕಾಂಕ್ಷಾ ಸಿಂಗ್ ಮಾತನಾಡಿ, 'ನನ್ನ ರ‍್ಯಾಂಕ್‌ ಮತ್ತು ಗುರುತನ್ನು ಬೇರೆಯವರು ನಕಲು ಮಾಡಿರುವುದು ಬೆಳಕಿಗೆ ಬಂದಿದೆ' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜತೆಗೆ ಇದಕ್ಕೆ ಸಂಬಂಧಿಸಿದ ಎರಡು ದಾಖಲೆಗಳನ್ನು ಆ ಪೋಸ್ಟ್‌ ಜತೆ ಲಗತ್ತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries