HEALTH TIPS

12ನೇ ತರಗತಿ ಮೌಲ್ಯಮಾಪನದಲ್ಲಿ ಸಮಸ್ಯೆಯಿಲ್ಲ: ಸಿಬಿಎಸ್‌ಇ

 ನವದೆಹಲಿ: 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿನ ದೋಷಗಳು ಮತ್ತು ವಿಳಂಬಗಳ ಕುರಿತ ಮಾಧ್ಯಮ ವರದಿಯನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಬುಧವಾರ ನಿರಾಕರಿಸಿದೆ. ಪ್ರಕ್ರಿಯೆಯು 'ಸಂಪೂರ್ಣ'ವಾಗಿ ಸಮರ್ಪಕವಾಗಿದೆ ಮತ್ತು ನಿಗದಿತ ವೇಳಾಪಟ್ಟಿಯ ಪ್ರಕಾರ ನಡೆಯುತ್ತಿದೆ ಎಂದು ಅದು ಪ್ರತಿಪಾದಿಸಿದೆ.



'ಮೊದಲೇ ಸೂಚಿಸಿದಂತೆ ಮೇ ತಿಂಗಳ ಮೂರನೇ ವಾರದಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ನಿರೀಕ್ಷಿಸಬಹುದು. ಹೊಸದಾಗಿ ಪರಿಚಯಿಸಲಾದ ಆನ್‌ ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳ ಬಗೆಗಿನ ಮಾದ್ಯಮ ವರದಿಗಳು ಅವಾಸ್ತವಿಕ' ಎಂದು ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಹೇಳಿದ್ದಾರೆ.

ಒಎಸ್‌ಎಂ ಎಂದರೆ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಪರದೆಯ ಮೇಲೆ ಡಿಜಿಟಲ್ ರೂಪದಲ್ಲಿ ಮೌಲ್ಯಮಾಪನ ಮಾಡುವ ವಿಧಾನವಾಗಿದೆ. ಇದರಲ್ಲಿ ಮೌಲ್ಯಮಾಪಕರು ಪೇಪರ್ ಬದಲಿಗೆ ಕಂಪ್ಯೂಟರ್ ಬಳಸಿ ಅಂಕಗಳನ್ನು ನೀಡುತ್ತಾರೆ. ಹೀಗಾಗಿ ಅಂಕಗಳ ಲೆಕ್ಕಾಚಾರದಲ್ಲಿ ತಪ್ಪುಗಳಾಗುವುದಿಲ್ಲ ಮತ್ತು ಫಲಿತಾಂಶ ಬೇಗನೇ ಪ್ರಕಟಿಸಬಹುದು ಎನ್ನಲಾಗಿದೆ.

'ಮೌಲ್ಯಮಾಪನವು ಈ ಹಿಂದಿನ ಮೌಲ್ಯಮಾಪನಕ್ಕಿಂತ ಉತ್ತಮವಾಗಿ ನಡೆಯುತ್ತಿದೆ. ಈ ವರ್ಷ ಪೂರ್ಣ ಪ್ರಮಾಣದ ಒಎಸ್‌ಎಂ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಕ್ಕೆ ಮಂಡಳಿಯು ತುಂಬಾ ಹೆಮ್ಮೆ ಪಡುತ್ತದೆ. ಮೌಲ್ಯಮಾಪನ ಮಾಡುತ್ತಿರುವ ಶಿಕ್ಷಕರು ಕೂಡ ಈ ವ್ಯವಸ್ಥೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ' ಎಂದು ಅವರು ಹೇಳಿದ್ದಾರೆ.

2026ರ ಬೋರ್ಡ್ ಪರೀಕ್ಷೆಗಳಿಂದ 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಒಎಸ್‌ಎಂ ಅನ್ನು ಪರಿಚಯಿಸುವುದಾಗಿ ಸಿಬಿಎಸ್‌ಇ ಫೆಬ್ರವರಿಯಲ್ಲಿ ಸುತ್ತೋಲೆ ಹೊರಡಿಸಿತ್ತು. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ನಿಖರತೆಯನ್ನು ಹೆಚ್ಚಿಸುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಮಂಡಳಿ ಹೇಳಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries