ಕಾಸರಗೋಡು: ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. 140 ಕ್ಷೇತ್ರಗಳ 30,495 ಬೂತ್ಗಳಲ್ಲಿ ಮತದಾನ ನಡೆಯುತ್ತಿದೆ. ಕೇರಳವನ್ನು ಯಾರು ಆಳುತ್ತಾರೆ ಎಂಬುದನ್ನು 2.71 ಕೋಟಿ ಮತದಾರರು ನಿರ್ಧರಿಸುತ್ತಿದ್ದಾರೆ. 23 ದಿನಗಳ ಕಾಲ 883 ಅಭ್ಯರ್ಥಿಗಳು ನಡೆಸಿದ ಬಿರುಸಿನ ಪ್ರಚಾರದ ನಂತರ ಕೇರಳ ಮತಗಟ್ಟೆಗಳಲ್ಲಿ ಇಂದು ಭವಿಷ್ಯ ನಿರ್ಧಾರಗೊಳ್ಳಲಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ನಟ ಮೋಹನ್ ಲಾಲ್ ಮತ್ತು ಇತರ ಅಭ್ಯರ್ಥಿಗಳು ಬೆಳಿಗ್ಗೆ ಮತಗಟ್ಟೆಗಳಿಗೆ ತಲುಪಿ ಮತ ಚಲಾಯಿಸಿದರು. ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ. 2500 ಸಮಸ್ಯೆ ಪೀಡಿತ ಬೂತ್ಗಳಲ್ಲಿ ವಿಶೇಷ ಜಾಗರೂಕತೆ ವಹಿಸಲಾಗಿದೆ. ಮೂರು ರಂಗಗಳು ಬಹಳ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿವೆ.
ಮತದಾನ ಆರಂಭಗೊಂಡು ಮೊದಲ ಎರಡು ಗಂಟೆಗಳಲ್ಲಿ (ಬೆಳಿಗ್ಗೆ 9)ರ ವರೆಗೆ ರಾಜ್ಯದಾದ್ಯಂತ 16.23 ಶೇ.ಮತ ಚಲಾವಣೆಗೊಂಡಿದೆ.
ತಿರುವನಂತಪುರಂ-16.25ಶೇ
ಕೊಲ್ಲಂ-16.04ಶೇ
ಪತ್ತನಂತಿಟ್ಟ-17.25ಶೇ
ಆಲಪ್ಪುಳ-17.90 ಶೇ
ಕೊಟ್ಟಾಯಂ-17.39
ಇಡುಕ್ಕಿ-16.97ಶೇ
ಎರ್ನಾಕುಳಂ-17.80ಶೇ
ತ್ರಿಶೂರ್-17.26ಶೇ
ಪಾಲಕ್ಕಾಡ್-17.74ಶೇ.
ಮಲಪ್ಪುರಂ_19.89ಶೇ
ಕೋಝಿಕ್ಕೋಡ್_17.68ಶೇ
ವಯನಾಡ್-16.77ಶೇ
ಕಣ್ಣೂರು-17.45ಶೇ
ಕಾಸರಗೋಡು-16.50ಶೇ.
ಎಂಬಂತೆ ಮತದಾನ ದಾಖಲಾಗಿದೆ. ಮಂಜೇರ್ಶವರ ವಿಧಾನ ಸಭಾ ಕ್ಷೇತ್ರದಲ್ಲಿ 16.18 ಶೇ.ಮತ ಚಲಾವಣೆಗೊಂಡಿದೆ.
ಬೆಳಿಗ್ಗೆ 7 ಗಂಟೆಯಿಂದಲೇ ಬಹುತೇಕ ಮತಗಟ್ಟೆಗಳಲ್ಲಿ ಜನಸಂದಣಿ ಕಂಡುಬಂದಿದೆ. ಬಿಸಿಲಿನ ಧಗೆಯ ಕಾರಣ ಹಲವೆಡೆ ಮತದಾರರಿಗೆ ಸಮಸ್ಯೆ ಸೃಷ್ಟಿಯಾಗುವ ಸೂಚನೆ ಇದೆ.




