HEALTH TIPS

ಅರ್ಧ ಶತಮಾನದ ಬಳಿಕ ಚಂದ್ರನೆಡೆಗೆ ನಾಸಾ: ನಭಕ್ಕೆ ಚಿಮ್ಮಿದ ಆರ್ಟೆಮಿಸ್-2

 ಅರ್ಧ ಶತಮಾನದ ಬಳಿಕ ಚಂದ್ರನೆಡೆಗೆ ಪ್ರಯಾಣ ಬೆಳೆಸಿರುವ ನಾಸಾ, ಐತಿಹಾಸಿಕ ಆರ್ಟೆಮಿಸ್-2 ಮಿಷನ್ ನೌಕೆಯನ್ನು ಉಡ್ಡಯನ ಮಾಡಿದೆ. 


ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾನಿಗಳನ್ನು ಹೊತ್ತ ಅತ್ಯಂತ ಶಕ್ತಿಶಾಲಿ ಎಸ್‌ಎಲ್‌ಎಸ್ ರಾಕೆಟ್ ನಭಕ್ಕೆ ಚಿಮ್ಮಿತು.

ನಾಸಾದ ಆರ್ಟೆಮಿಸ್ ಎರಡನೇ ಯೋಜನೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

1972ರ ಅಪೊಲೊ 17 ಮಿಷನ್ ನಂತರ ಮಾನವಸಹಿತ ನೌಕೆಯೊಂದು ಚಂದ್ರನ ಕಕ್ಷೆಗೆ ಪ್ರಯಾಣ ಬೆಳೆಸಿರುವುದು ಇದೇ ಮೊದಲು.

ಈ ಯೋಜನೆ 10 ದಿನಗಳು ನಡೆಯಲಿದೆ. ಈ ಗಗನಯಾನದಲ್ಲಿ ರೀಡ್ ವೈಸ್‌ಮನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಹಾಗೂ ಜೆರೆಮಿ ಹ್ಯಾನ್ಸೆನ್ ಭಾಗಿಯಾಗಿದ್ದಾರೆ.

ಈ ಯೋಜನೆಯು ಭವಿಷ್ಯದಲ್ಲಿ ಚಂದ್ರನ ಮೇಲೆ ಇಳಿಯುವ ಯೋಜನೆಗೆ ಬಲ ತುಂಬಲಿದೆ.

ಟ್ರಂಪ್ ಶ್ಲಾಘನೆ:

ನಮಗೆ ಯಾರೂ ಸರಿಸಾಟಿಯಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಸಾದ ಯೋಜನೆಯನ್ನು ಬಣ್ಣಿಸಿದ್ದಾರೆ.

'ಬಾಹ್ಯಾಕಾಶದಲ್ಲಿ ನಾವೇ ಗೆಲ್ಲುತ್ತಿದ್ದೇವೆ. ಭೂಮಿಯ ಮೇಲೆ, ಆರ್ಥಿಕವಾಗಿಯೂ, ಮಿಲಿಟರಿಯಲ್ಲೂ ಈಗ ನಕ್ಷತ್ರಗಳನ್ನು ಮೀರಿ ಎಲ್ಲ ಕಡೆಗಳಲ್ಲೂ ಗೆಲ್ಲುತ್ತಿದ್ದೇವೆ. ನಮ್ಮ ಹತ್ತಿರದಲ್ಲೂ ಯಾರೂ ಇಲ್ಲ. ಅಮೆರಿಕ ಸ್ಪರ್ಧಿಸುವುದಷ್ಟೇ ಅಲ್ಲದೆ ಅಧಿಪತ್ಯವನ್ನು ಸ್ಥಾಪಿಸುತ್ತಿದೆ. ಇಡೀ ಜಗತ್ತೇ ವೀಕ್ಷಿಸುತ್ತಿದೆ. ನಮ್ಮ ಅದ್ಭುತ ಗಗನಯಾತ್ರಿಗಳು, ನಾಸಾ ಮತ್ತು ಜಗತ್ತಿನ ಶ್ರೇಷ್ಠ ರಾಷ್ಟ್ರ ಅಮೆರಿಕವನ್ನು ದೇವರು ಆಶೀರ್ವದಿಸಲಿ' ಎಂದು ಬರೆದುಕೊಂಡಿದ್ದಾರೆ. 



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries