ಕಾಸರಗೋಡು: ಉಕ್ಕಿನಡ್ಕ ಸನಿಹದ ನೆಲ್ಲಿಕುಂಜೆಯ ಕೀಯೂರು ತರವಾಡು(ಮಧೂರು) ಶ್ರೀದೈವಗಳ ನೇಮೋತ್ಸವ ಮೇ 2ಹಾಗೂ 3ರಂದು ಜರುಗಲಿದೆ. 2ರಂದು ಬೆಳಗ್ಗೆ 7.30ಕ್ಕೆ ಗಣಪತಿ ಹವನ
11ಕ್ಕೆ ಹರಿಸೇವೆ, ಸಂಜೆ 7.30ಕ್ಕೆ ಭಂಡಾರ ತೆಗೆಯುವುದು, ರಾತ್ರಿ 8ಕ್ಕೆ ಶ್ರೀ ದೈವಗಳ ತೊಡೊಙಲ್, ಕುಳಿಚ್ಚಾಟ, ರಾತ್ರಿ 9ಕ್ಕೆ ಕೊರತ್ತಿಯಮ್ಮನ ಕೋಲ ನಡೆಯುವುದು.
3ರಂದು ಬೆಳಗ್ಗೆ 11ಕ್ಕೆ ಧರ್ಮದೈವ ಪಡಿಞËರ್ ಚಾಮುಂಡಿ ಮತ್ತು ವಿಷ್ಣುಮೂರ್ತಿ ದೈವಗಳ ಕೋಲ ನಡೆಯುವುದು. ಸಂಜೆ 4ಕ್ಕೆ ಶ್ರೀ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ
ಸಾಯಂ 6ಕ್ಕೆ ಭಂಡಾರ ಯಥಾ ಸ್ಥಾನದಲ್ಲಿ ಇರಿಸುವ ಕಾರ್ಯಕ್ರಮ ನಡೆಯುವುದು.

