ಪೆರ್ಲ: ಮಣಿಯಂಪಾರೆ ದುರ್ಗಾನಗರ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶಿಲಾನ್ಯಾಸ ನಡೆಸಿದರು.
ತಂತ್ರಿವರ್ಯ ವೇದಮೂರ್ತಿ ಚಂದ್ರಶೇಖರ ನಾವಡ ಬಜಕೂಡ್ಲು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಶಿಲ್ಪಿ ಪದ್ಮನಾಭ ಆಚಾರ್ಯ ಸೀತಾಂಗೊಳಿ, ನಿರ್ಮಾಣ ಶಿಲ್ಪಿ ಮನೋಜ್ ಮಣಿಯಾಣಿ ತಚ್ಚಂಗಾಡ್ ಉಪಸ್ಥಿತರಿದ್ದರು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ದೇವರನ್ನು ಸುಲಭ ಹಾಗೂ ಸುಲಲಿತವಾಗಿ ಒದಗಿಸಿಕೊಳ್ಳುವಲ್ಲಿ ಭಜನೆ ಭಕ್ತಿಯ ಮಾರ್ಗವಾಗಿದೆ. ಭಜನೆಯ ಮಹತ್ವವನ್ನು ಮಕ್ಕಳಿಗೆ ತಿಳಿಹೇಳಬೇಕು. ಭಜನಾ ಮಂದಿರದಂತಹ ಶ್ರಧ್ಧಾ ಕೇಂದ್ರಗಳು ನಮ್ಮ ಭಕ್ತಿಯ ಜತೆಗೆ ಸನಾತನ ಧರ್ಮದ ಬಗ್ಗೆ ಬೋಧನೆ ನೀಡುವ ತಾಣಗಳಾಗಬೇಕು ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಞಣ್ಣ ಮಾಸ್ಟರ್ ನೆಕ್ಕರೆಪದವು, ಶ್ರೀರಾಂ ಭಟ್ ಗುಂಡಿತ್ತಾರು, ಸ್ಥಾಪಕ ಸದಸ್ಯ ಗೋವಿಂದ ನಾಯ್ಕ್ ಅರೆಮಂಗಿಲ, ಉದಯ ಚೆಟ್ಟಿಯಾರ್, ಬಿ.ಪಿ.ಶೇಣಿ, ಸಂಕಪ್ಪ ಸುವರ್ಣ ಬಾಡೂರು, ಗಂಗಾಧರ ಮಾಸ್ಟರ್, ಸುರೇಶ್ ನಾಯ್ಕ್ ಕೆದ್ರೋಳಿ, ಜಯ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು.



