HEALTH TIPS

ಏ. 30 ರಂದು ಪೆರ್ಲ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಕಟ್ಟಡ ಹಾಗೂ ಧ್ಯಾನ ಮಂದಿರದ ಶಿಲಾನ್ಯಾಸ

ಪೆರ್ಲ: ಪೆರ್ಲ ಕಾಟುಕುಕ್ಕೆ ರಸ್ತೆ ಬಳಿಯ ನಿವೇಶನದಲ್ಲಿ ನೂತನವಾಗಿ ನಿರ್ಮಿಸಲಾಗುವ ಧ್ಯಾನ ಮಂದಿರ ಹಾಗೂ ಪೆರ್ಲ ನಾಲಂದ ಕಾಲೇಜು ಸಮೀಪದ ನಿವೇಶನದಲ್ಲಿ ನಿರ್ಮಿಸಲಾಗುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಕಟ್ಟಡದ ಶಿಲಾನ್ಯಾಸ ಸಮಾರಂಭ ಏ.30 ರಂದು ನಡೆಯಲಿದೆ. 

ಬೆಳಗ್ಗೆ 8.02ರ ಮುಹೂರ್ತದಲ್ಲಿ ಧ್ಯಾನ ಮಂದಿರದ ಶಿಲಾನ್ಯಾಸವನ್ನು ಡಾ.ಪರ್ತಜೆ ಸುಬ್ಬಣ್ಣ ಭಟ್ ಹಾಗೂ 10.53ರ ಮುಹೂರ್ತದಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಕಟ್ಟಡದ ಶಿಲಾನ್ಯಾಸವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನೆರವೇರಿಸುವರು.

ನಾಲಂದಾ ಕಾಲೇಜು ಸಭಾಂಗಣದಲ್ಲಿ ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆಯಲ್ಲಿ 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಎಡನೀರು ಮಠಾಧೀಶರು ಆಶೀರ್ವಚನ ನೀಡುವರು. 

ಸೆಂಟ್ರಲ್ ಸ್ಕೂಲ್ ಗೌರವ ಸಲಹೆಗಾರ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡುವರು. ಎನ್ ಐಟಿಕೆ ಸುರತ್ಕಲ್ ನಿವೃತ್ತ ಪ್ರಾಚಾರ್ಯ ಡಾ.ಪರ್ತಜೆ ಸುಬ್ಬಣ್ಣ ಭಟ್, ಮಣಿಪಾಲ ಅನಂತನಗರ ಉದ್ಭವ್ ಡಿಸೈನ್ ಸ್ಟುಡಿಯೋ ಎಂಜಿನಿಯರ್ ಸುಮಂತ್, ವಾಸ್ತುತಜ್ಞ ಪ್ರಸನ್ನ ಮುಳಿಯಾಲ, ಹರೀಶ ಶೆಣೈ ಪೆರ್ಲ, ವಾಸ್ತುತಜ್ಞ ಸುಬ್ಬಯ್ಯ ವರ್ಮುಡಿ ಉಪಸ್ಥಿತರಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries