HEALTH TIPS

ಪಡ್ರೆ ಸೂರಂಬೈಲುಕಟ್ಟೆ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ; ನೂತನ ನಾಗಶಿಲಾ ಪ್ರತಿಷ್ಠೆ

ಪೆರ್ಲ: ಸ್ವರ್ಗ ಸಮೀಪದ ಪಡ್ರೆ ಸೂರಂಬೈಲುಕಟ್ಟೆ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೂತನ ನಾಗಶಿಲಾ ಪ್ರತಿಷ್ಠೆ ಬ್ರಹ್ಮ ಶ್ರೀ ವಿಶ್ವೇಶ್ವರ ಪುರೋಹಿತ ಆಚಾರ್ಯ ಬೆಳ್ಳಾರೆ ನೇತೃತ್ವದಲ್ಲಿ ಶುಕ್ರವಾರ ನೆರವೇರಿಸಲಾಯಿತು. ಗುರುವಾರ ಸಂಜೆ ದೀಪ ಪ್ರಜ್ವಲನೆ, ದೇವತಾ ಪ್ರಾರ್ಥನೆ, ರಾತ್ರಿ ತೋರಣ ಪ್ರತಿಷ್ಠೆ, ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಅಧಿವಾಸಾದಿ ಕ್ರಿಯೆಗಳು ನಡೆದವು. 


ಶುಕ್ರವಾರ ಬೆಳಗ್ಗೆ ಶ್ರೀ ದೇವಿಯ ಬಿಂಬ ಪ್ರತಿಷ್ಠೆ ಮತ್ತು ಶ್ರೀ ನಾಗದೇವರ ಪ್ರತಿಷ್ಠೆ, ಆಶ್ಲೇಷ ಬಲಿ, ಪರಿವಾರ ಸಾನಿಧ್ಯಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ವಸಂತಪೂಜೆ, ಸೇವಾಲಂಕಾರ ಪೂಜೆ, ಮಧ್ಯಾಹ್ನ 12.30ರಿಂದ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ ಮತ್ತು ಗೀತಾಯಜ್ಞ ಬಳಗದವರಿಂದ ಶ್ರೀ ಲಲಿತಾ ಸಹಸ್ರನಾಮ ಪಠನೆ, ಶ್ರೀ ಭಗವದ್ಗೀತೆ ಪಾರಾಯಣ, ಸಂಜೆ ಭಜನಾ ಸೇವೆ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries