ಕರಾಚಿ (PTI): ಆಗ್ನೇಯ ಪಾಕಿಸ್ತಾನದಲ್ಲಿ ಏಳು ಶಿಶುಗಳು ಮೃತಪಟ್ಟಿದ್ದು, ಆ ಪೈಕಿ ನಾಲ್ಕು ಶಿಶುಗಳಲ್ಲಿ ಎಂಪಾಕ್ಸ್ (ಮಂಕಿ ಪಾಕ್ಸ್) ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಸಿಂಧ್ ಪ್ರಾಂತ್ಯದ ಖೈರಪುರ ನಗರದಲ್ಲಿ ಎಂಪಾಕ್ಸ್ ಪ್ರಕರಣ ವರದಿಯಾಗಿದೆ.
ಕರಾಚಿಯಲ್ಲಿ ಏಳು ಶಿಶುಗಳ ರಕ್ತ ಪರೀಕ್ಷೆ ಮಾಡಲಾಗಿದ್ದು, ನಾಲ್ಕು ಶಿಶುಗಳಲ್ಲಿ ಎಂಪಾಕ್ಸ್ ಸೋಂಕು ಇರುವುದು ಪ್ರಾಥಮಿಕ ವರದಿಯಲ್ಲಿ ಪತ್ತೆಯಾಗಿದೆ ಎಂದರು.
ಆರೋಗ್ಯ ಇಲಾಖೆ ಶನಿವಾರ ಹೊರಡಿಸಿದ್ದ ಪ್ರಕಟಣೆಯಲ್ಲಿ, 'ಶಿಶುಗಳ ಸಾವಿಗೆ ಎಂಪಾಕ್ಸ್ ನೇರ ಕಾರಣವಲ್ಲ. ಮೃತಪಟ್ಟ ಎಲ್ಲಾ ಶಿಶುಗಳು ಅವಧಿಪೂರ್ವ ಜನನ, ಕಡಿಮೆ ತೂಕ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದವು' ಎಂದು ತಿಳಿಸಿತ್ತು.

