HEALTH TIPS

ಏರಿದ AI ವೆಚ್ಚ; ಮಾರ್ಚ್‌ನಲ್ಲಿ ದಾಖಲೆಯ 45,000 ಉದ್ಯೋಗಗಳನ್ನು ಕಡಿತಗೊಳಿಸಿದ ತಂತ್ರಜ್ಞಾನ ಕಂಪನಿಗಳು

ತಂತ್ರಜ್ಞಾನ ಕಂಪನಿಗಳು 2026 ಮಾರ್ಚ್ನಲ್ಲಿ 45,800ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ ಎಂದು Layoffs.fyi ದತ್ತಾಂಶ ತಿಳಿಸಿದೆ. ಈ ದತ್ತಾಂಶ ಕಳೆದ ಎರಡು ವರ್ಷಗಳಲ್ಲಿ ಈ ವಲಯದಲ್ಲಿ ಅತಿ ಹೆಚ್ಚು ಮಾಸಿಕ ಉದ್ಯೋಗ ಕಡಿತವಾಗಿದೆ. ಈ ವರ್ಷ ಈವರೆಗೆ 98 ತಂತ್ರಜ್ಞಾನ ಕಂಪನಿಗಳಲ್ಲಿ 92,272 ಉದ್ಯೋಗಿಗಳು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ದತ್ತಾಂಶ ತೋರಿಸಿದೆ.

ಮಾರ್ಚ್‌ನಲ್ಲಿ ಒರಾಕಲ್ ಸಂಸ್ಥೆ ಅತಿ ಹೆಚ್ಚು ಅಂದರೆ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ವರದಿಗಳ ಪ್ರಕಾರ ಈ ಕಡಿತವನ್ನು ಒರಾಕಲ್ ಆರ್ಗನೈಸೇಶನಲ್ ಚೇಂಜ್ (ಸಾಂಸ್ಥಿಕ ಬದಲಾವಣೆ) ಎಂದು ಕರೆದಿದೆ. ಅನೇಕ ಸಂಸ್ಥೆಗಳು ಕೃತಕ ಬುದ್ಧಿಮತ್ತೆ ಮೂಲಸೌಕರ್ಯದಲ್ಲಿ ಹೂಡಿಕೆಗಾಗಿ ಬಂಡವಾಳ ಮುಕ್ತಗೊಳಿಸಲು ಸಿಬ್ಬಂದಿ ಕಡಿತ ಮಾಡುತ್ತಿವೆ. ಮಾರ್ಚ್ನಲ್ಲಿ ಅಟ್ಲಾಸಿಯನ್ ಸಂಸ್ಥೆಯು AI ಮತ್ತು ಎಂಟರ್ಪ್ರೈಸ್ ಮಾರಾಟದ ಮೇಲಿನ ಹೆಚ್ಚಿದ ವೆಚ್ಚದಿಂದಾಗಿ 1600 ಉದ್ಯೋಗಿಗಳನ್ನು ವಜಾ ಮಾಡಿದೆ. ಎಪಿಕ್ ಗೇಮ್ಸ್ ತನ್ನ ಶೇ 20ರಷ್ಟು ಕಾರ್ಮಿಕ ಪಡೆ ಅಂದರೆ 1000 ಉದ್ಯೋಗಿಗಳನ್ನು ವಜಾಗೊಳಿಸಿದೆ. ತನ್ನ ಗೇಮ್ ಹೆಚ್ಚು ಜನಪ್ರಿಯವಾಗಿಲ್ಲದೆ ಇರುವುದರಿಂದ ಈ ಕಡಿತ ಮಾಡಬೇಕಾಗಿ ಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ಮೆಟಾ ತನ್ನ ರಿಯಾಲಿಟಿ ಲ್ಯಾಬ್ಸ್ ವಿಭಾಗದಿಂದ ಮೆಟಾವರ್ಸ್ ಯೋಜನೆಗೆ ಸಂಬಂಧಿಸಿದ 700 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿ ಈ ವರ್ಷ ಇನ್ನೂ 8000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿರುವುದಾಗಿ ವರದಿಯಾಗಿದೆ. ಅಂದರೆ 2026ರ ನಂತರದ ಹಂತದಲ್ಲಿ ತನ್ನ ಶೇ 10ರಷ್ಟು ಕಾರ್ಮಿಕಪಡೆಯ ಕಡಿತಕ್ಕೆ ಯೋಜನೆ ರೂಪಿಸಿದೆ.

ವರದಿಗಳ ಪ್ರಕಾರ ಮೈಕ್ರೋಸಾಫ್ಟ್ 8750 ಹುದ್ದೆಗಳಿಗೆ ಸ್ವಯಂಪ್ರೇರಿತವಾಗಿ ತೊರೆಯುವಂತೆ ಆಕರ್ಷಕ ಪ್ಯಾಕೇಜ್ಗಳನ್ನು ಮುಂದಿಟ್ಟಿದೆ. ಆದರೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಇಂತಹ ವ್ಯಾಪಕ ಪ್ರಮಾಣದ ವಜಾಗಳ ಬಗ್ಗೆ ಎಚ್ಚರಿಸಿದೆ. ಉದ್ಯಮ ಯೋಜನೆ, ಗ್ರಾಹಕ ಬೆಂಬಲ ಮತ್ತು ಸುರಕ್ಷಿತವಾಗಿ AI ವ್ಯವಸ್ಥೆ ನಿಯೋಜನೆಯಲ್ಲಿ ಒಳಗೊಂಡಿರುವ ಸಿಬ್ಬಂದಿ ಕಡಿತಗೊಳ್ಳುವುದರಿಂದ ಕಂಪನಿಗಳು ದುರ್ಬಲವಾಗಬಹುದು ಎಂದು ವರದಿ ಎಚ್ಚರಿಸಿದೆ. ಹೀಗೆ ಕೆಲಸದಿಂದ ತೆಗೆದು ಹಾಕಿದಲ್ಲಿ ಕೌಶಲ್ಯಪೂರ್ಣ ಉದ್ಯೋಗಿಗಳು ಹೊಸ ಕಂಪನಿಗಳನ್ನು ಆರಂಭಿಸಲು ಕಾರಣವಾಗಬಹುದು. AI ವಿರುದ್ಧ ಜನರ ಆಕ್ರೋಶವೂ ಹೆಚ್ಚಾಗಬಹುದು ಎಂದು ವರದಿ ಎಚ್ಚರಿಸಿದೆ.

ವಿಶ್ಲೇಷಕರ ಪ್ರಕಾರ ವಜಾಗೊಳಿಸಲು AI ಹೂಡಿಕೆ ಮಾತ್ರ ಕಾರಣವಾಗಿರದೆ ಇರಬಹುದು. ಕೆಲವು ಕಂಪನಿಗಳು ತಮ್ಮ ಹಿಂದಿನ ವರ್ಷಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೇಮಕಾತಿ ಮಾಡಿಕೊಂಡಿರುವುದನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿವೆ. ಆ ಮೂಲಕ ಉತ್ಪಾದನಾಶೀಲತೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. S&P ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ದತ್ತಾಂಶದ ಪ್ರಕಾರ ಮೈಕ್ರೋಸಾಫ್ಟ್ನಂತಹ ಸ್ಪರ್ಧಿಗಳಿಗೆ ಹೋಲಿಸಿದರೆ ಒರಾಕಲ್ ಕಡಿಮೆ ವಾರ್ಷಿಕ ಆದಾಯ ಗಳಿಸುತ್ತಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries