HEALTH TIPS

ಭಾರತ-ಚೀನಾವನ್ನು 'ನರಕಗಳು' ಎಂದ ಪತ್ರ ಮರು ಪೋಸ್ಟ್: ಪೌರತ್ವ ವಿವಾದಕ್ಕೆ ನಾಂದಿ ಹಾಡಿದ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್‌ನಲ್ಲಿ ಭಾರತ ಹಾಗೂ ಚೀನಾವನ್ನು ʼನರಕಗಳುʼ ಎಂದು ಉಲ್ಲೇಖಿಸುವ ವಿವಾದಾತ್ಮಕ ಪತ್ರವನ್ನು ಮರು ಹಂಚಿಕೊಂಡಿದ್ದು, ಜನ್ಮಸಿದ್ಧ ಪೌರತ್ವದ ಕುರಿತ ಚರ್ಚೆಗೆ ನಾಂದಿ ಹಾಡಿದೆ.

ಮರು ಪೋಸ್ಟ್ ಮಾಡಿದ ಈ ಪತ್ರದಲ್ಲಿ, ಅಮೆರಿಕದಲ್ಲಿ ಜನಿಸಿದವರಿಗೆ ಸ್ವಯಂಚಾಲಿತವಾಗಿ ನಾಗರಿಕತ್ವ ನೀಡುವ 'ಜನ್ಮಸಿದ್ಧ ಪೌರತ್ವ' ವ್ಯವಸ್ಥೆಯನ್ನು ಕಟುವಾಗಿ ಟೀಕಿಸಲಾಗಿದೆ. ಈ ನೀತಿ ವಲಸಿಗರಿಗೆ ಹೆರಿಗೆಯ ಮೂಲಕ ದೇಶದಲ್ಲಿ ನೆಲೆಗೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದು ಆರೋಪಿಸಲಾಗಿದ್ದು, ಅಮೆರಿಕದಲ್ಲಿ ಜನಿಸಿದ ಮಗು ತಕ್ಷಣ ನಾಗರಿಕನಾಗುವುದರಿಂದ ನಂತರ ಕುಟುಂಬದ ಇತರ ಸದಸ್ಯರಿಗೂ ವಲಸೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಈ ವಿಚಾರವನ್ನು ನ್ಯಾಯಾಲಯಗಳು ತೀರ್ಮಾನಿಸಬಾರದು; ಬದಲಿಗೆ ಅಮೆರಿಕದ ನಾಗರಿಕರೇ ನಿರ್ಧರಿಸಬೇಕು ಎಂಬ ಅಭಿಪ್ರಾಯ ಪತ್ರದಲ್ಲಿ ವ್ಯಕ್ತವಾಗಿದೆ. ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ACLU) ಸೇರಿದಂತೆ ಕೆಲವು ಕಾನೂನು ಸಂಸ್ಥೆಗಳು ಅಕ್ರಮ ವಲಸೆಗೆ ಅನುಕೂಲವಾಗುವ ನೀತಿಗಳಿಗೆ ಬೆಂಬಲ ನೀಡುತ್ತಿವೆ ಹಾಗೂ ಸಾರ್ವಜನಿಕ ವ್ಯವಸ್ಥೆಗಳ ಮೇಲೆ ಒತ್ತಡ ಉಂಟುಮಾಡುತ್ತಿವೆ ಎಂಬ ಆರೋಪ ಮಾಡಲಾಗಿದೆ.

ವಲಸಿಗರು ಕಲ್ಯಾಣ ಯೋಜನೆಗಳು ಹಾಗೂ ಆರೋಗ್ಯ ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಾರೆ ಎಂದು ಹೇಳಲಾಗಿದ್ದು, ಕ್ಯಾಲಿಫೋರ್ನಿಯಾ ರಾಜ್ಯವನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ACLU ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹದ ಜೊತೆಗೆ, ವಲಸೆ ನಿಯಂತ್ರಣಕ್ಕೆ ಬಲವಾದ ಕ್ರಮಗಳನ್ನು ಜಾರಿಗೆ ತರಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ.

ಅಮೆರಿಕದ ಸಂವಿಧಾನವು ಇಂದಿನ ತಂತ್ರಜ್ಞಾನ ಮತ್ತು ಜಾಗತಿಕ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಶ್ನೆಯನ್ನು ಪತ್ರ ಉಲ್ಲೇಖಿಸಿದೆ. ವಿಮಾನಯಾನ, ಇಂಟರ್ನೆಟ್ ಮತ್ತು ಟೆಲಿವಿಶನ್ ಗೂ ಮೊದಲು ರೂಪುಗೊಂಡ ಈ ಸಂವಿಧಾನವನ್ನು ಇಂದಿನ ಸಂದರ್ಭಕ್ಕೆ ಹೊಂದಿಸಿ ಪರಿಗಣಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಜನ್ಮಸಿದ್ಧ ಪೌರತ್ವದಂತಹ ಪ್ರಮುಖ ವಿಷಯಗಳನ್ನು ಜನಮತದ ಮೂಲಕ ನಿರ್ಧರಿಸಬೇಕು ಎಂಬ ಸೂಚನೆಯೂ ನೀಡಲಾಗಿದೆ.

ಇನ್ನೊಂದೆಡೆ, ಇತ್ತೀಚಿನ ವಲಸೆ ಪ್ರವಾಹದಿಂದ ಅಮೆರಿಕದ ಸಾಂಸ್ಕೃತಿಕ ಹಾಗೂ ಸಾಮಾಜಿಕ ರಚನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಐರಿಶ್, ಇಟಾಲಿಯನ್, ಪೋಲಿಷ್ ಸೇರಿದಂತೆ ಹಿಂದಿನ ಯುರೋಪಿಯನ್ ವಲಸಿಗರು ಅಮೆರಿಕ ಸಮಾಜದಲ್ಲಿ ಯಶಸ್ವಿಯಾಗಿ ಏಕೀಕೃತಗೊಂಡಿದ್ದರೆ, ಇಂದಿನ ಪರಿಸ್ಥಿತಿಯಲ್ಲಿ ಆ ಪ್ರಕ್ರಿಯೆ ಕುಂದಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries