ಟೆಹರಾನ್: ಇಸ್ರೇಲ್ ಮತ್ತು ಅಮೆರಿಕ ಪರವಾಗಿ ಕೆಲಸ ಮಾಡುತ್ತಿದ್ದ ಎಂಬ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬರನ್ನು ಇರಾನ್ ಅಧಿಕಾರಿಗಳು ಗಲ್ಲಿಗೇರಿಸಿದ್ದಾರೆ ಎಂದು ನ್ಯಾಯಾಂಗ ತಿಳಿಸಿದೆ.
ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಅಮೀರ್ ಹೊಸೇನ್ ಹತಾಮಿಯನ್ನು ಗುರುವಾರ ಮುಂಜಾನೆ ಗಲ್ಲಿಗೇರಿಸಲಾಯಿತು ಎಂದು ನ್ಯಾಯಾಂಗದ ಮಿಜಾನ್ ಆನ್ಲೈನ್ ವೆಬ್ಸೈಟ್ ತಿಳಿಸಿದೆ.
'ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ವರ್ತಿಸುತ್ತಿದ್ದ ಅಮೀರ್, ಜನವರಿಯಲ್ಲಿ ನಡೆದ ಪ್ರತಿಭಟನೆ ವೇಳೆ ಮಿಲಿಟರಿ ಕೇಂದ್ರವೊಂದಕ್ಕೆ ನುಗ್ಗಿ ಅಲ್ಲಿ ಸಂಗ್ರಹಿಸಲಾದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ನಾಶಪಡಿಸಲು ಯತ್ನಿಸಿದ್ದ' ಎಂದು ಅದು ತಿಳಿಸಿದೆ.

