ಬದಿಯಡ್ಕ: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಏ. 9 ರಂದು ವಿವಿಧ ಧಾರ್ಮಿಕ, ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 8 ರಿಂದ ಗಣಪತಿ ಹೋಮ ಮಹಾಪೂಜೆ, ನವಕಾದಿ ವಿಶೇಷ ಅಭಿಷೇಕ, ಮಧ್ಯಾಹ್ನ 12.30ಗೆ ಮಹಾಪೂಜೆ, ಸಂಜೆ 6 ಗಂಟೆಯಿಂದ ಉಭಯ ದೇವರುಗಳ ದೀಪಾರಾಧನೆ ಹಾಗೂ ದರ್ಶನ ಬಲಿ, ಮಹಾಪೂಜೆ ನಡೆಯುವುದು.

