ಜಾಫರ್ಪುರ ಕಲಾನ್ ಗ್ರಾಮದಲ್ಲಿ ನಿನ್ನೆ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಸಮೀಪದ ಕಾಲನಿಯೊಂದರಲ್ಲಿ ವಾಸವಿರುವ ಕೆಲವು ಕಾರ್ಮಿಕರು ಪಾರ್ಟಿಯಲ್ಲಿ ತೊಡಗಿದ್ದು, ಗದ್ದಲವೆಬ್ಬಿಸಿದ್ದರು ಎನ್ನಲಾಗಿದೆ. ಸಮೀಪದಲ್ಲಿ ವಾಸವಾಗಿರುವ ಪೋಲಿಸ್ ಅಧಿಕಾರಿ ಇದನ್ನು ವಿರೋಧಿಸಿ ಕಾರ್ಮಿಕರೊಂದಿಗೆ ಜಗಳವಾಡಿದ್ದು,ಈ ವೇಳೆ ಅವರತ್ತ ಗುಂಡು ಹಾರಿಸಿದ್ದ ಎಂದ ಮೂಲಗಳು ತಿಳಿಸಿವೆ.
ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

