HEALTH TIPS

ಹರ್ಭಜನ್ ಸಿಂಗ್ ಗೆ ಪಂಜಾಬ್ ಸರ್ಕಾರ ಭದ್ರತೆ ಹಿಂಪಡೆದ ಬಳಿಕ ಕೇಂದ್ರ ಸರಕಾರದಿಂದ CRPF ಭದ್ರತೆ; ವರದಿ

ನವದೆಹಲಿ: ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರಿಗೆ ಕೇಂದ್ರ ಗೃಹಸಚಿವಾಲಯವು CRPF ಭದ್ರತೆಯನ್ನು ಒದಗಿಸಿದೆ ಎಂದು ಬಲ್ಲ ಮೂಲಗಳು ಭಾನುವಾರ ತಿಳಿಸಿವೆ ಎಂದು indiatoday.in ವರದಿ ಮಾಡಿದೆ.

ಸಿಂಗ್ ಬಿಜೆಪಿಗೆ ಸೇರ್ಪಡೆಗೊಂಡಿದ್ದನ್ನು ವಿರೋಧಿಸಿ ಆಪ್ ಕಾರ್ಯಕರ್ತರು ಶನಿವಾರ ಪಂಜಾಬಿನ ಜಲಂಧರ್ ನಲ್ಲಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು.

ಶುಕ್ರವಾರ ಬಿಜೆಪಿಗೆ ಪಕ್ಷಾಂತರಗೊಂಡ ಆಪ್ ನ ಏಳು ಸಂಸದರಲ್ಲಿ ಓರ್ವರಾಗಿರುವ ಹರ್ಭಜನ್ ಸಿಂಗ್ ಗೆ ಈಗ ದಿಲ್ಲಿ ಮತ್ತು ಪಂಜಾಬ್‌ ನಲ್ಲಿ CRPF ಕಮಾಂಡೋಗಳು ರಕ್ಷಣೆಯನ್ನು ಒದಗಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಪಂಜಾಬ್ ಸರಕಾರವು ಸಿಂಗ್ ಗೆ ನೀಡಿದ್ದ ಸುಮಾರು 10 ಅಧಿಕಾರಿಗಳ ತಂಡದ ರಕ್ಷಣೆಯನ್ನು ಶನಿವಾರ ಹಿಂದೆಗೆದುಕೊಂಡಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರವು ಹರ್ಭಜನ್ ಸಿಂಗ್ ಗೆ ಭದ್ರತೆಯನ್ನು ಒದಗಿಸಿದ್ದು, ರವಿವಾರ ಜಲಂಧರ್ ನ ಅವರ ನಿವಾಸದ ಹೊರಗೆ CRPF ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಶನಿವಾರ ಪ್ರತಿಭಟನೆ ಸಂದರ್ಭದಲ್ಲಿ ಆಪ್ ಕಾರ್ಯಕರ್ತರು ಸಿಂಗ್ ಅವರ ನಿವಾಸದ ಕಾಂಪೌಂಡ್ ಗೋಡೆಯ ಮೇಲೆ ಸ್ಪ್ರೇ ಪೇಂಟ್ನಿಂದ 'ಗದ್ದಾರ್(ದ್ರೋಹಿ)' ಎಂದು ಬರೆದಿದ್ದರು. ಆಪ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಅಶೋಕ ಮಿತ್ತಲ್ ಮತ್ತು ರಾಜೇಂದ್ರ ಗುಪ್ತಾ ಅವರ ಪಂಜಾಬಿನಲ್ಲಿಯ ನಿವಾಸಗಳ ಮುಂದೆಯೂ ಪ್ರತಿಭಟನೆಗಳು ನಡೆದಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries