HEALTH TIPS

ಇರಾನ್ ಜೊತೆಗಿನ ಮಾತುಕತೆ ವಿಫಲ: ಪಾಕಿಸ್ತಾನದಿಂದ ನಿರ್ಗಮಿಸಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್

ಟೆಹರಾನ್: ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವಿವಾರ ಪಾಕಿಸ್ತಾನದಿಂದ ನಿರ್ಗಮಿಸಿದ್ದಾರೆ.

21 ಗಂಟೆಗಳ ಕಾಲ ನಡೆದ ಮಾತುಕತೆಗಳ ನಂತರವೂ ಇರಾನ್-ಅಮೆರಿಕ ಒಪ್ಪಂದ ಮಾಡಿಕೊಳ್ಳಲು ವಿಫಲವಾಗಿದೆ. ಇದರಿಂದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ಲಾಮಾಬಾದ್‌ನಿಂದ ವಾಪಾಸ್ಸಾಗಿದ್ದಾರೆ.

"ನಾವು ಈಗ 21 ಗಂಟೆಗಳ ಕಾಲ ಹಲವಾರು ಮಹತ್ವದ ಚರ್ಚೆಗಳನ್ನು ನಡೆಸಿದ್ದೇವೆ. ಅದು ಒಳ್ಳೆಯ ಸುದ್ದಿ. ಕೆಟ್ಟ ಸುದ್ದಿ ಎಂದರೆ ನಾವು ಒಪ್ಪಂದಕ್ಕೆ ಬಂದಿಲ್ಲ ಎಂಬುದಾಗಿದೆ" ಎಂದು ಜೆಡಿ ವ್ಯಾನ್ಸ್ ಹೇಳಿದರು.

"ನಮ್ಮ ಕೆಂಪು ರೇಖೆಗಳು ಯಾವುವು, ನಾವು ಯಾವ ವಿಷಯಗಳ ಬಗ್ಗೆ ಅವಕಾಶ ನೀಡಲು ಸಿದ್ಧರಿದ್ದೇವೆ ಮತ್ತು ನಾವು ಯಾವ ವಿಷಯಗಳ ಬಗ್ಗೆ ಅವಕಾಶ ನೀಡಲು ಸಿದ್ದರಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ನಮ್ಮ ಷರತ್ತುಗಳನ್ನು ಸ್ವೀಕರಿಸದಿರಲು ಇರಾನಿನ ನಿಯೋಗ ನಿರ್ಧರಿಸಿದೆ" ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries