ಮುಳ್ಳೇರಿಯ: ಕಾಸರಗೋಡು ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್‍ರ ಪರವಾಗಿ ಮತ ಯಾಚಿಸಲು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು(ಭಾನುವಾರ) ಮಜೀರ್ಪಳ್ಳ ಮತ್ತು ಮುಳ್ಳೇರಿಯಕ್ಕೆ ಆಗಮಿಸುವರು.
ಸಂಜೆ 5ಕ್ಕೆ ಮಂಜೇಶ್ವರ ಕ್ಷೇತ್ರದ ಮಜೀರ್ಪಳ್ಳದಲ್ಲಿ ನಡೆಯುವ ಯುಡಿಎಫ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಎಕೆಎಂ ಅಶ್ರಫ್ ಪರ ಮತಯಾಚನೆ ನಡೆಸುವರು.ಬಳಿಕ ಸಂಜೆ 7.30ಕ್ಕೆ ಕಾಸರಗೋಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಅವರ ಪರವಾಗಿ ಮುಳ್ಳೇರಿಯದಲ್ಲಿ ನಡೆಯುವ ಸಭೆಯಲ್ಲಿ ಮತ ಯಾಚಿಸುವರು.
ಇದೇ ವೇಳೆ ಕೇರಳ ವಿಪಕ್ಷ ಮುಖಂಡ ವಿ.ಡಿ. ಸತೀಶನ್ ಶನಿವಾರ ಜಿಲ್ಲೆಗೆ ಆಗಮಿಸಿದ್ದು, ಬೆಳಿಗ್ಗೆ ಬದಿಯಡ್ಕ ಪೇಟೆಯಲ್ಲಿ ನಡೆದ ಐಕ್ಯರಂಗದ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಬಳಿಕ ಬೋವಿಕ್ಕಾನ ಪೇಟೆಯಲ್ಲಿ ನಡೆದ ಉದುಮ ವಿಧಾನಸಭಾ ಮಂಡಲ ಐಕ್ಯರಂಗದ ಚುನಾವಣಾ ಸಾರ್ವಜನಿಕ ಸಭೆಯನ್ನು ಅವರು ಉ
ದ್ಘಾಟಿಸಿದರು.

