HEALTH TIPS

ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಸಭಾಭವನದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ

ಬದಿಯಡ್ಕ: ಅರಶಿನ ಕುಂಕುಮ ಹಿಂದೂ ಧರ್ಮದ ಸಂಸ್ಕøತಿಯಾಗಿದೆ. ಮನುಷ್ಯ ಜೀವನದಲ್ಲಿ ನಡೆಯುವ ಪ್ರತೀ ಹೆಜ್ಜೆ ಮತ್ತು ಬದುಕು ಒಂದು ಪರಿಪಾಠವಾಗಿದೆ. ನಾವು ಬದುಕುವ ಮಹತ್ವವೇ ಹಿಂದುತ್ವ, ಹಿಂಧೂ ಧರ್ಮ ಅಂತ ನಮ್ಮ ನೆನಪಲ್ಲಿರಬೇಕು ಎಂದು ವಾಗ್ಮಿ ಸಹನಾ ಕುಂದರ್ ಉಡುಪಿ ಹೇಳಿದರು. 


ಸನಾತನ ಸಾಂಸ್ಕೃತಿಕ ಯುವ ಕಲಾವೇದಿಕೆ ಕಾಸರಗೋಡು ಇವರ ನೇತೃತ್ವದಲ್ಲಿ ಶುಕ್ರವಾರ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಸಭಾಭವನದಲ್ಲಿ ಜರಗಿದ ಅರಶಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯÁಗಿ ಪಾಲ್ಗೊಂಡು ಅವರು ಮಾತನಾಡಿದರು.

ತೊಟ್ಟಿಲು ತೂಗುವ ಕೈ ಇಂದು ದೇಶವನ್ನು ಆಳುವ ಮಟ್ಟಿಗೂ ತಲುಪಿದೆ. ಈ ಪುಣ್ಯ ಭೂಮಿಯಲ್ಲಿ ಹುಟ್ಟಿರುವುದು ನಮ್ಮ ಪಾಲಿನ ಪುಣ್ಯ. ಕುಂಕುಮ ಅರಶಿನ ಫ್ಯಾಶನ್ ಅಲ್ಲ. ಅದು ನಮ್ಮ ಸಂಸ್ಕೃತಿಯಾಗಿದೆ. ಹೆಣ್ಣುಮಕ್ಕಳ ಹಣೆಯಲ್ಲಿ ಕುಂಕುಮ, ಕೈಗಳಿಗೆ ಬಳೆಗಳು, ಕಾಲ್ಬೆರಳಿಗೆ ಕಾಲುಂಗುರಗಳು, ಕುತ್ತಿಗೆಗೆ ಆಭರಣಗಳು ಭೂಷಣವೂ ಹೌದು ಆರೋಗ್ಯಕ್ಕೆ ಪೂರಕವೂ ಹೌದು ಎಂದರು. 


ಪೊಡಿಪ್ಪಳ್ಳ ಭಂಡಾರಮನೆಯ ರಾಜೀವಿ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ನಗರಪಾಲಿಕಾ ಸದಸ್ಯ ಸಂತೋಷ್ ಶೆಟ್ಟಿ ಮುಂಬೈ, ಪ್ರಮುಖರಾದ ರವೀಂದ್ರ ರೈ ಗೋಸಾಡ, ಕುಂಬ್ಡಾಜೆ ಪಂ. ಅಧ್ಯಕ್ಷೆ ಯಶೋಧ ಎನ್., ಕಾರಡ್ಕ ಪಂ. ಅಧ್ಯಕ್ಷೆ ಜನನಿ, ಬದಿಯಡ್ಕ ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಅನಿತಾ ಕಾಸರಗೋಡು, ವೀಣಾ ಅರುಣ್ ಶೆಟ್ಟಿ, ಪ್ರಮೀಳಾ ಮಜಲು ಪಾಲ್ಗೊಂಡಿದ್ದರು. ಲಕ್ಷ್ಮೀ ಮಾರ್ಪನಡ್ಕ ಸ್ವಾಗತಿಸಿ, ಚಂದ್ರಕಲಾ ನೆಟ್ಟಣಿಗೆ ವಂದಿಸಿದರು. ಪೊಡಿಪ್ಪಳ್ಳ ಶಾರದಾಂಬ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ಬದಿಯಡ್ಕ ಮಂಡಲ ಕುಟುಂಬ ಸಂಗಮ ಸಂಯೋಜಕ ರಾಜೇಶ್ ಶೆಟ್ಟಿ ಕುಂಬ್ಡಾಜೆ ನಿರೂಪಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಅವರಿಗೆ ಅರಶಿನ ಕುಂಕುಮವಿಟ್ಟು ಅಭಿನಂದಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries