HEALTH TIPS

ಶಾಂತಿಗೆ ಅಡ್ಡಿಯಾದರೆ ಬಾಬ್ ಅಲ್-ಮಂದಬ್ ಜಲಸಂಧಿ ಬಂದ್‌ ಮಾಡುತ್ತೇವೆ: ಅಮೆರಿಕ ಮತ್ತು ಮಿತ್ರರಾಷ್ಟ್ರಗಳಿಗೆ ಹೌತಿಗಳಿಂದ ಎಚ್ಚರಿಕೆ

 ಸನಾ:  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿಗೆ ಅಡ್ಡಿಯಾಗುವ ಕ್ರಮಗಳನ್ನು ಮುಂದುವರಿಸಿದರೆ, ಯೆಮೆನ್‌ ನ ಹೌತಿ ಬಂಡುಕೋರರು ಬಾಬ್ ಅಲ್-ಮಂದಬ್ ಜಲಸಂಧಿಯನ್ನು ಮುಚ್ಚುವ ಎಚ್ಚರಿಕೆ ನೀಡಿದ್ದಾರೆ ಎಂದು ಂಟರಿಚಿzeeಡಿಚಿ ವರದಿ ಮಾಡಿದೆ.


ಯೆಮೆನ್ ಕರಾವಳಿಯಲ್ಲಿರುವ ಈ ಪ್ರಮುಖ ಸಮುದ್ರ ಮಾರ್ಗವನ್ನು ಬಂದ್ ಮಾಡುವ ಸಾಧ್ಯತೆ ಇದೆ ಎಂದು ಸನಾದಲ್ಲಿರುವ ಹೌತಿ ಸರಕಾರದ ಉಪ ವಿದೇಶಾಂಗ ಸಚಿವ ಹುಸೇನ್ ಅಲ್-ಎಝ್ಝಿ ಹೇಳಿದ್ದಾರೆ.

"ಯೆಮನ್, ಬಾಬ್ ಅಲ್-ಮಂದಬ್ ಅನ್ನು ಮುಚ್ಚಲು ನಿರ್ಧರಿಸಿದರೆ, ಅದನ್ನು ಮತ್ತೆ ತೆರೆಯಲು ಮಾನವಕುಲಕ್ಕೂ ಜಿನ್ ಗಳಿಗೂ ಸಾಧ್ಯವಾಗುವುದಿಲ್ಲ," ಎಂದು ಅವರು ಘಿನಲ್ಲಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಟ್ರಂಪ್ ಹಾಗೂ ಅಮೆರಿಕ ಸೇರಿದಂತೆ ಅದರ ಮಿತ್ರ ರಾಷ್ಟ್ರಗಳು ಶಾಂತಿಗೆ ಅಡ್ಡಿಯಾಗುವ ನೀತಿಗಳನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ಜನರು ಮತ್ತು ದೇಶದ ಹಕ್ಕುಗಳಿಗೆ ಗೌರವ ನೀಡಬೇಕು," ಎಂದು ಅವರು ಹೇಳಿದ್ದಾರೆ.

ಬಾಬ್ ಅಲ್-ಮಂದಬ್ ಜಲಸಂಧಿ ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯನ್ನು ಸಂಪರ್ಕಿಸುವ ಪ್ರಮುಖ ಸಮುದ್ರ ಮಾರ್ಗವಾಗಿದೆ. ಸೂಯೆಜ್ ಕಾಲುವೆ ಕಡೆಗೆ ಹೋಗುವ ಹಡಗುಗಳು ಇದೇ ದಾರಿಯನ್ನು ಬಳಸುತ್ತವೆ. ಜಲಸಂಧಿಯ ಅತಿ ಕಿರಿದಾದ ಭಾಗವು ಸುಮಾರು 29 ಕಿಮೀ ಅಗಲವಿದ್ದು, ಹಡಗು ಸಂಚಾರವು ಎರಡು ಪ್ರತ್ಯೇಕ ಮಾರ್ಗಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಈ ಜಲಸಂಧಿ ಜಾಗತಿಕ ವ್ಯಾಪಾರಕ್ಕೆ ಬಹಳ ಮುಖ್ಯ. ತೈಲ ಮತ್ತು ಇಂಧನವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸಲು ಹಡಗುಗಳು ಇದೇ ದಾರಿಯನ್ನು ಬಳಸುತ್ತವೆ. ರಷ್ಯಾ ಸೇರಿದಂತೆ ಹಲವು ದೇಶಗಳ ಸರಕು ಸಾಗಣೆಯೂ ಇದೇ ಮಾರ್ಗದ ಮೂಲಕ ನಡೆಯುತ್ತದೆ. 








Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries