HEALTH TIPS

ಜಾ....ಗೃ(ಘೃ)ತ ಮತದಾರ: ಮತ ಚಲಾಯಿಸಿದ ಬೆರಳಿನ ಚರ್ಮ ಸುಟ್ಟು ಚಿಕಿತ್ಸೆ: ಪರಿಹಾರ ಕೋರಿ ದೂರು ನೀಡಿದ ಮತದಾರ

ಕೊಚ್ಚಿ: ಮತದಾನ ಮಾಡುವಾಗ ತನ್ನ ಬೆರಳಿನ ಮೇಲೆ ಹಾಕಲಾದ ಶಾಯಿ ಗುರುತಿನಿಂದ ಆರೋಗ್ಯ ಸಮಸ್ಯೆಗಳು ಉಂಟಾಗಿವೆ ಎಂದು ಆರೋಪಿಸಿ ಮತದಾರರೊಬ್ಬರು ದೂರು ದಾಖಲಿಸಿದ್ದಾರೆ ಮತ್ತು ಪರಿಹಾರವನ್ನು ಕೋರಿದ್ದಾರೆ. ದೂರುದಾರರು ಪಲ್ಲುರುತಿ ಪಿಡಿ ರಸ್ತೆಯ ತಟ್ಟಪರಂಬಿಲ್‍ನ ಟಿವಿ ಸನಲ್ ಬಾಬು. 


ಎರಡು ದಿನಗಳ ನಂತರ, ತಾನು ಮತ ಚಲಾಯಿಸಿದ ಬೆರಳಿನ ಭಾಗದಲ್ಲಿ ತುರಿಕೆ ಮತ್ತು ನೋವು ಅನುಭವಿಸಿದೆ ಮತ್ತು ಮರುದಿನ ತನ್ನ ಬೆರಳಿನ ಚರ್ಮ ಕಿತ್ತು ಬಂದಿರುವುದಾಗಿ  ಬಾಬು ತಮ್ಮ ದೂರಿನಲ್ಲಿ ಹೇಳುತ್ತಾರೆ.

ಬೆರಳು ಸುಟ್ಟುಹೋದಂತೆ ವಿರೂಪಗೊಂಡಿತು. ಇದರೊಂದಿಗೆ, ನೋವು ಮತ್ತು ಊತವೂ ಇತ್ತು. ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಲಾಯಿತು. ಆದರೆ ಅಲ್ಲಿ ಯಾವುದೇ ಔಷಧಿ ಇಲ್ಲದ ಕಾರಣ, ಆಸ್ಪತ್ರೆ ಅಧಿಕಾರಿಗಳು ಅದನ್ನು ಹೊರಗಿನಿಂದ ಖರೀದಿಸಲು ಹೇಳಿದರು.

ಆದ್ದರಿಂದ, ಮತದಾನದಿಂದಾಗಿ ತನಗೆ ಉಂಟಾದ ಗಾಯಕ್ಕೆ ಚಿಕಿತ್ಸೆಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸನಲ್ ಬಾಬು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries