ಅಲಪ್ಪುಳ: ದೇಶದ ಇತರೆ ಭಾಗಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುವವರೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈಜೋಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ-ಎಲ್‌ಡಿಎಫ್ ನಡುವಿನ ಹೊಂದಾಣಿಕೆಯ ಆರೋಪವನ್ನು ಪುನರುಚ್ಚರಿಸಿದರು.
ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಬರಿಮಲೆ ವಿಷಯದ ಬಗ್ಗೆ ಮಾತನಾಡಲಿಲ್ಲ ಎಂದು ಹೇಳಿದ್ದಾರೆ.
ಇಂಧನ, ಅನಿಲ ಕೊರತೆ: ಬಿಜೆಪಿಗರು ತಪ್ಪೊಪ್ಪಿಕೊಂಡು ಜನರ ಕ್ಷಮೆ ಕೇಳಲಿ-ಡಿಕೆಶಿಪಿಎನ್‌ಜಿಗೆ ಅರ್ಜಿ ಸಲ್ಲಿಸಿದರೆ ಮಾತ್ರ ಉದ್ಯಮಗಳಿಗೆ ಐPಉ ಪೂರೈಕೆ: ದೆಹಲಿ ಸರ್ಕಾರ
ಮೋದಿ ಅವರು ತಮ್ಮ ಭಾಷಣಗಳಲ್ಲಿ ಧರ್ಮ ಮತ್ತು ದೇವಾಲಯಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಚುನಾವಣೆ ಲಾಭಗಳಿದ್ದರೆ ಅಷ್ಟೇ ಅವರು ಧರ್ಮಗಳ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿರುವ ರಾಹುಲ್, ಕೇರಳದಲ್ಲಿ ಶಬರಿಮಲೆ ಚಿನ್ನ ಪ್ರಕರಣದ ಬಗ್ಗೆ ಮೌನವಾಗಿದ್ದಾರೆ ಏಕೆ ಎಂದು ಪ್ರಶ್ನಿಸಿದ್ದಾರೆ.
'ಬಿಜೆಪಿ ಮತ್ತು ಆರ್‌ಎಸ್‌ಎಸ್ ನನ್ನ ಮೇಲೆ ಸದಾ ದಾಳಿ ಮಾಡುತ್ತವೆ, ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತವೆ. ಆದರೆ, ಪ್ರಧಾನಿ ಮೋದಿ ಅವರು ಕೇರಳ ಮುಖ್ಯಮಂತ್ರಿ ಅಥವಾ ಅವರ ಕುಟುಂಬದ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಥವಾ ವಾಗ್ದಾಳಿ ನಡೆಸುತ್ತಿಲ್ಲ?' ಎಂದಿದ್ದಾರೆ.
ಹರಿಯಾಣದಲ್ಲಿ ಅಡ್ಡಮತದಾನ: ಐವರು ಕಾಂಗ್ರೆಸ್ ಶಾಸಕರ ಉಚ್ಚಾಟನೆ ಸಾಧ್ಯತೆ?ಧ್ವಂಸಗೊಂಡ ಕ್ಷಿಪಣಿ ಬಂಕರ್‌ಗಳನ್ನು ದುರಸ್ತಿಗೊಳಿಸಿ ದಾಳಿ ನಡೆಸುತ್ತಿದೆ ಇರಾನ್!
ಕೇರಳದಲ್ಲಿ ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ.

