ಪಬ್‌ಜಿ ಗೆಳೆಯನಿಗಾಗಿ ಭಾರತಕ್ಕೆ ಬಂದು ಸುದ್ದಿಯಾಗಿದ್ದ ಪಾಕ್ ಪ್ರಜೆ ಸೀಮಾ ಹೈದರ್ ಇದೀಗ ತಮ್ಮ ಮಗನಿಗೆ 'ಭಾರತ್' ಎಂದು ನಾಮಕರಣ ಮಾಡಿದ್ದಾರೆ.
ಸೀಮಾ ಹೈದರ್ ಅವರು ಪಬ್‌ಜಿ (PubG) ಆನ್‌ಲೈನ್ ಗೇಮ್ ಮೂಲಕ ಭಾರತದ ಸಚಿನ್ ಮೀನಾ ಅವರಿಗೆ ಪರಿಚಿತರಾಗಿದ್ದರು.
ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಬಳಿಕ 2023ರ ಮೇ ತಿಂಗಳಲ್ಲಿ ತಮ್ಮ ನಾಲ್ವರು ಮಕ್ಕಳೊಂದಿಗೆ ಉತ್ತರಪ್ರದೇಶದ ನೊಯ್ಡಾಕ್ಕೆ ಬಂದಿದ್ದ ಸೀಮಾ ಅವರು ಸಚಿನ್ ಅವರನ್ನು ವಿವಾಹವಾಗಿದ್ದರು.
ವಾಮಾಚಾರ ಆರೋಪ: ಪಾಕ್ ಮಹಿಳೆ ಸೀಮಾ ಹೈದರ್ ಮನೆಗೆ ನುಗ್ಗಲೆತ್ನಿಸಿದ ವ್ಯಕ್ತಿಪಬ್‌ಜಿ ಗೆಳೆಯನಿಗಾಗಿ ಭಾರತಕ್ಕೆ ಬಂದಿದ್ದ ಪಾಕ್ ಪ್ರಜೆ ಸೀಮಾ ಹೈದರ್ ಇದೀಗ ಗರ್ಭಿಣಿ
2026ರ ಫೆಬ್ರುವರಿ 18ರಂದು ನೋಯ್ಡಾದ ಆಸ್ಪತ್ರೆಯಲ್ಲಿ ಸೀಮಾ ಹೈದರ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ದಂಪತಿ ತಮ್ಮ ಮಗುವಿಗೆ ಭಾರತ್ ಎಂದು ಹೆಸರಿಟ್ಟು ನಾಮಕರಣ ಮಾಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತಾಡಿದ ಸೀಮಾ ಹೈದರ್, 'ಪುರೋಹಿತರು 'ಭಾ' ಎಂಬ ಅಕ್ಷರದಿಂದ ಹೆಸರು ಇಡಲು ಸೂಚಿಸಿದರು. ಸಾಕಷ್ಟು ಯೋಚಿಸಿದ ನಂತರ, 'ಭಾರತ್' ಎಂಬ ಹೆಸರನ್ನು ಆಯ್ಕೆ ಮಾಡಿದೇವು. ಭಾರತ್ ಎನ್ನುವುದಕ್ಕಿಂತ ಉತ್ತಮವಾದ ಹೆಸರು ಇನ್ನೊಂದಿಲ್ಲ. ಭಾರತಕ್ಕೆ ಬಂದ ನಂತರ ನಾನು ತುಂಬಾ ಸಂತೋಷವಾಗಿದ್ದೇನೆ. ಪಾಕಿಸ್ತಾನವನ್ನು ತೊರೆದಿದ್ದಕ್ಕಾಗಿ ಎಂದಿಗೂ ವಿಷಾದಿಸಿಲ್ಲ ಎಂದಿದ್ದಾರೆ.

