HEALTH TIPS

ವಿದ್ಯಾರ್ಥಿಗಳ ಕೈಗನ್ನಡಿ ಕಲಿಕೋತ್ಸವ-ಮುಳಿಂಜ ಶಾಲೆಯಲ್ಲಿ ಬೀಳ್ಕೊಡುಗೆ, ಪದವಿ ಪ್ರದಾನ

ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ನಡೆಯಿತು. ಮಂಜೇಶ್ವರ ಬಿ.ಪಿ.ಸಿ ರಾಜಗೋಪಾಲನ್ ಉದ್ಘಾಟಿಸಿ ಕಲಿಕೋತ್ಸವವು ವಿದ್ಯಾರ್ಥಿಗಳ ಉತ್ಸವವಾಗಿದೆ. ತಾನು ಆರ್ಜಿಸಿದನ್ನು ಪ್ರದರ್ಶಿಸುವ ಒಂದು ಉತ್ತಮ ವೇದಿಕೆಯಾಗಿದೆ. ಹೆತ್ತವರು ಹಾಗೂ ಸಮಾಜದ ಸಮ್ಮುಖದಲ್ಲಿ ತನ್ನ ಹಿರಿಮೆಯನ್ನು ತೋರ್ಪಡಿಸುತ್ತಾ ತನ್ನ ಸಾರ್ಥಕತೆಯ ಪ್ರತೀಕವಾಗಿ ಕಲಿಕೋತ್ಸವ ಮೂಡಿಬರುತ್ತಿದೆ. ಇದೊಂದು ಶಾಲೆಯ ಹಾಗೂ ವಿದ್ಯಾರ್ಥಿಗಳ ಕೈಗನ್ನಡಿ ಎಂದು ಹೇಳಿದರು. 


ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ವಿಭಿನ್ನವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಪದವಿ ನೀಡುವ ಮೂಲಕ ಪದವಿ ಪ್ರಧಾನ ಸಮಾರಂಭವು ಅವರಿಗೆ ಪದವಿ ಟೋಪಿ ಧರಿಸಿ ಫ್ರೇಮ್ ನೀಡಿ ಹಿತವಚನಗಳನ್ನಾಡಿ ಹಾರೈಸಲಾಯಿತು. ಎಲ್ಲಾ ತರಗತಿಯ  ವಿದ್ಯಾರ್ಥಿಗಳ ಸೃಜನ ಶೀಲತೆಯ ಉತ್ಪನ್ನಗಳಾದ ಕಥೆ, ಪದ್ಯ, ಸಂಭಾಷಣೆ ಒಗಟು, ಗಾದೆ ನುಡಿಮುತ್ತು ಚಿತ್ರಗಳು ರಸಪ್ರಶ್ನೆ ಮೊದಲಾದುವುಗಳನ್ನೊಳಗೊಂಡ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. 

ಕಾರ್ಯಕ್ರಮದಲ್ಲಿ ಎಸ್.ಎಂ.ಸಿ ಅಧ್ಯಕ್ಷ ಇಬ್ರಾಹಿಂ ಹನಿಫೀ ಅಧ್ಯಕ್ಷತೆ ವಹಿಸಿದ್ದರು. ಎಂ.ಪಿ.ಟಿ.ಎ ಅಧ್ಯಕ್ಷೆ ಸುಷ್ಮಾ ರಮೇಶ್ ಮತ್ತು ಸೈಬೂನಿಸ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಿಕ್ಷಕಿ ಜಸೀಲಾ ಅವರ ನೇತೃತ್ವದಲ್ಲಿ ಶಾಲಾ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಗಳಿಸಿದವರಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಶಿಕ್ಷಕಿ ಧನ್ಯ ಪಿ.ವಿ ವಂದಿಸಿದರು. ಅಬ್ದುಲ್ ಬಶೀರ್ ನಿರೂಪಿಸಿದರು. ವಿದ್ಯಾರ್ಥಿಗಳ ಕಲಾ ಸಾಂಸ್ಕøತಿಕ ಚಟುವಟಿಕೆಗಳು ನಡೆಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries