ಮಂಜೇಶ್ವರ: ನಕಲಿ ಮತದಾನದ ಆರೋಪದಂತೆ ಮತದಾನ ಮಾಡಿದ ಯುವಕನೋರ್ವನನ್ನು ಪೆÇಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಮಂಡಲದ ಕಯ್ಯಾರಿನ 128ನೇ ಸಂಖ್ಯೆಯ ಮತಗಟ್ಟೆಯಲ್ಲಿ ನಕಲಿ ಮತದಾನದ ಆರೋಪ ಕೇಳಿಬಂದಿತ್ತು. ವಿದೇಶದಲ್ಲಿರುವ ಖಾಲಿದ್ ಎಂಬ ವ್ಯಕ್ತಿಯ ಮತವನ್ನು ಜಾಫರ್ ಎಂಬ ವ್ಯಕ್ತಿ ಚಲಾಯಿಸಿದ್ದಾನೆಂಬ ಬಿಜೆಪಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಜಾಫರ್ನನ್ನು ಚುನಾವಣಾಧಿಕಾರಿಗಳು ತಡೆದು ನಿಲ್ಲಿಸಿ ನಂತರ ಪೆÇಲೀಸರು ವಶಕ್ಕೆ ಒಪ್ಪಿಸಿದ್ದರು.

