ಕಾಸರಗೋಡು: ಜಿಲ್ಲೆಯ ಸಂಸದ, ಶಾಸಕರು ಹಾಗೂ ಪ್ರಮುಖ ಅಭ್ಯರ್ಥಿಗಳು ವಿವಿಧ ಕೇಮದ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಕಾಸರಗೋಡು ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಹಾಗೂ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ವರ್ಕಾಡಿ ಪಂಚಾಯಿತಿ ಕೊಡ್ಲಮೊಗರು ಶ್ರೀ ವಾಣಿವಿಜಯ ಎಯುಪಿ ಶಾಲೆಯಲ್ಲಿ 49ನೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಅವರು ನೆಲ್ಲಿಕುಂಗೆ ಹೆಣ್ಮಕ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ ಚಲಾಯಿಸಿದರು. ಖ್ಯಾತ ಚಲನಚಿತ್ರ ನಟ ಉಣ್ಣಿರಾಜ್ ಅವರು ಕೊವ್ವಲ್ ಎ. ಯುಪಿ ಶಾಲೆಯಲ್ಲಿ ಮತ ಚಲಾಯಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮತ್ತು ಕುಟುಂಬದವರು ಕಾಞಂಗಾಡಿನ ಪಡನ್ನಕ್ಕಾಡ್ ಶ್ರೀ ನಾರಾಯಣ ಶಾಲೆಯ 209ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಉದುಮ ಕ್ಷೇತ್ರದ ಎಡರಂಗ ಅಭ್ಯರ್ಥಿ ಸಿ. ಹೆಚ್. ಕುಂಞಂಬು ಅವರು ಕುಂಡಂಗುಳಿ ಜಿಎಚ್‍ಎಸ್‍ಎಸ್‍ಮ 177ನೇ ಮತಗಟ್ಟೆಯಲ್ಲಿ ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿದರು.



