HEALTH TIPS

ದಾಳಿಗೆ ವರ್ಷ: ಛಲದಿಂದ ಬದುಕು ಕಟ್ಟಿಕೊಂಡ ಸ್ಥಳೀಯರು, ಬದಲಾಗುತ್ತಿದೆ ಪಹಲ್ಗಾಮ್

 ಪಹಲ್ಗಾಮ್: ಕಾಡುಗಳು, ಲಿದ್ದರ್ ನದಿ ಮತ್ತು ನಿಸರ್ಗದ ಸೌಂದರ್ಯಕ್ಕೆ ಹೆಸರಾದ ಕಾಶ್ಮೀರದ ಪಹಲ್ಗಾಮ್, ಒಂದು ವರ್ಷದ ಹಿಂದೆ ನಡೆದ ಆ ದಾಳಿಯಿಂದ ಅಕ್ಷರಶಃ ನಲುಗಿ ಹೋಗಿತ್ತು. ಆ ಘಟನೆ ಕೇವಲ ಪ್ರವಾಸೋದ್ಯಮದ ಮೇಲೆ ಹೊಡೆತ ನೀಡಿದ್ದಷ್ಟೇ ಅಲ್ಲದೆ, ಈ ಕಣಿವೆಯ ಜನರ ಬದುಕನ್ನೇ ಅಸ್ತವ್ಯಸ್ತಗೊಳಿಸಿತ್ತು.


ಆದರೆ, ಇಂದು ಅಘಾತದಿಂದ ಚೇತರಿಸಿಕೊಳ್ಳುತ್ತಿರುವ ಪಹಲ್ಗಾಮ್, ಭಯದ ವಿರುದ್ಧ ಜಯ ಸಾಧಿಸಿರುವುದಕ್ಕೆ ಸಾಕ್ಷಿಯಾಗಿ ನಿಂತಿದೆ.

ದಾಳಿಯ ಪರಿಣಾಮವಾಗಿ ಪ್ರವಾಸಿಗರಿಲ್ಲದೆ ಹೋಟೆಲ್‌ಗಳು ಖಾಲಿಯಾಗಿದ್ದವು. ಸ್ಥಳೀಯ ಮಾರ್ಗದರ್ಶಕರು (ಗೈಡ್‌ಗಳು), ಕುದುರೆ ಸವಾರರು ಮತ್ತು ಸಣ್ಣ ವ್ಯಾಪಾರಿಗಳ ಜೀವನ ಅನಿಶ್ಚಿತತೆಗೆ ಸಿಲುಕಿತ್ತು. ಆದರೆ, ಇಂದು ಪ್ರವಾಸಿಗರು ಮತ್ತೆ ಪಹಲ್ಗಾಮ್‌ನತ್ತ ಮುಖ ಮಾಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದ್ದು, ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳುತ್ತಿದೆ.

ಪಹಲ್ಗಾಮ್‌ ದಾಳಿಗೆ ಒಂದು ವರ್ಷ: ಭಾರತ ಭಯೋತ್ಪಾದನೆಗೆ ತಲೆಬಾಗಲ್ಲ ಎಂದ ಮೋದಿIPಐ 2026 | ಎಲ್ಲಾ ಅದಲು-ಬದಲು: ಆರೆಂಜ್ ಕ್ಯಾಪ್ ಓಟದಲ್ಲಿ ಇಬ್ಬರು Sಖಊ ಬ್ಯಾಟರ್

ಒಂದು ವರ್ಷದ ನಂತರ ಪಹಲ್ಗಾಮ್ ಮೊದಲಿಗಿಂತ ಭಿನ್ನವಾಗಿ ಕಾಣುತ್ತಿದೆ. ಇಲ್ಲಿ ಈಗ ಭದ್ರತೆ ಹೆಚ್ಚಾಗಿದೆ. ಎಲ್ಲೆಡೆ ಕಾಣುವ ಚೆಕ್‌ಪೋಸ್ಟ್‌ಗಳು ಮತ್ತು ಗಸ್ತು ವಾಹನಗಳು ಸಾಮಾನ್ಯ ಎನ್ನುವಂತಾಗಿವೆ

ನಾವು ಅಂಗಡಿಗಳನ್ನು ಮುಚ್ಚಿದರೆ ಹೆದರಿ ಕೂತಂತೆ ಎನ್ನುವ ಸ್ಥಳೀಯರು, ಜೀವನೋಪಾಯಕ್ಕಾಗಿ ಗಟ್ಟಿ ನಿಲುವು ಮಾಡಿದ್ದಾರೆ.. ಭಯವನ್ನು ಬದಿಗಿಟ್ಟು ಬದುಕು ಕಟ್ಟಿಕೊಳ್ಳುವ ಛಲ ಇಲ್ಲಿ ಎದ್ದು ಕಾಣುತ್ತಿದೆ.

ಇಲ್ಲಿನ ಜನರ ಮನಸ್ಸಿನಿಂದ ಆ ಕರಾಳ ನೆನಪುಗಳು ಇನ್ನು ಮಾಸಿಲ್ಲ. ಆದರೂ ಕೆಫೆಗಳು ತೆರೆದಿವೆ, ಮಾರುಕಟ್ಟೆಗಳು ಗಿಜಿಗುಡುತ್ತಿವೆ. ಪ್ರವಾಸಿಗರು ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ. ಈ ಬದಲಾವಣೆಯು ಕೇವಲ ಆರ್ಥಿಕತೆಯನ್ನಷ್ಟೇ ಅಲ್ಲ. ಮನೋಬಲವನ್ನೂ ಸುಧಾರಿಸಿದೆ.

ಇಲ್ಲಿಂದ ಹೊರಗೆ ಹೋಗುವ ಆಲೋಚನೆ ಇರಲಿಲ್ಲ. ಇಲ್ಲೇ ಉಳಿಯುವುದು, ಮತ್ತೆ ಬದುಕು ಕಟ್ಟಿಕೊಳ್ಳುವುದು ನಮ್ಮ ಆಯ್ಕೆಯಾಗಿತ್ತು. ದೈನಂದಿನ ಕೆಲಸಗಳನ್ನು ಮುಂದುವರಿಸುವುದೇ ಆ ದಾಳಿಗೆ ನಾವು ನೀಡಿದ ಮೌನ ಉತ್ತರ ಎನ್ನುತ್ತಾರೆ ಸ್ಥಳೀಯರು.

2025ರ ಏ‍ಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಅಮಾಯಕರ ಪ್ರಾಣ ಪಕ್ಷಿ ಹಾರಿಹೋಗಿತ್ತು. 26 ಮಂದಿ ಮೃತಪಟ್ಟಿದ್ದರೆ, ಕೆಲವರಿಗೆ ಗಾಯಗಳಾಗಿದ್ದವು.

ಈ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮಿರದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ 100ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಯಿತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries