ಎಪ್ರಿಲ್ 13ರಂದು ದಿಲ್ಲಿ ಹೈಕೋರ್ಟ್ನಲ್ಲಿ ತನ್ನ ಪ್ರಕರಣವನ್ನು ವಾದಿಸುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಎಪ್ರಿಲ್ 15ರಂದು ಕೇಜ್ರಿವಾಲ್ ಅವರ ವಾದದ ಅನಧಿಕೃತ ವೀಡಿಯೊಗಳನ್ನು ತೆಗೆದುಹಾಕುವಂತೆ ಪೊಲೀಸರಿಗೆ ತಿಳಿಸಿತ್ತು.
ನ್ಯಾಯಾಲಯದ ಕಲಾಪಗಳ ವೀಡಿಯೋಗಳನ್ನು ಅನಧಿಕೃತವಾಗಿ ಹಂಚಿಕೊಂಡಿದ್ದಕ್ಕಾಗಿ ಕೇಜ್ರಿವಾಲ್ ಹಾಗೂ ಪತ್ರಕರ್ತ ರವೀಶ್ ಕುಮಾರ್ ವಿರುದ್ಧ ಮಾನನಷ್ಟು ಮೊಕದ್ದಮೆ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಲಿಕೆ ನಡೆಸಿದ ಗುರುವಾರ, ಸಂದರ್ಭ ವಿಭಾಗೀಯ ಪೀಠದ ನ್ಯಾಯಾಧೀಶರುಗಳಾದ ವಿ.ಕಾಮೇಶ್ವರ ರಾವ್ ಹಾಗೂ ಮನಪ್ರೀತ್ ಪ್ರೀತಮ್ಸಿಂಗ್ ಆರೋರಾ ಈ ಆದೇಶ ನೀಡಿದ್ದಾರೆ.
ನ್ಯಾಯಾಲಯದ ವರ್ಚಸ್ಸಿಗೆ ಕಳಂಕ ತರುವ ದುರುದ್ದೇಶದಿಂದ ಕೇಜ್ರಿವಾಲ್ ಮತ್ತಿತರು ವೀಡಿಯೋದ ಕ್ಲಿಪ್ಪಿಂಗ್ಗಳನ್ನು ಹಂಚಿಕೊಂಡಿದ್ದಾರೆಂದು ಅರ್ಜಿದಾರರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ದಿಗ್ವಿಜಯ ಸಿಂಗ್ ಹಾಗೂ ಆಪ್ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ಸಂಜೀವ್ ಝಾ, ಪೂರನ್ದೀಪ್ ಸಾಹ್ನಿ, ಜರ್ನೈಲ್ ಸಿಂಗ್, ಮುಕೇಶ್ ಅಹ್ಲಾವತ್ ಹಾಗೂ ವಿನಯಮಿಶ್ರಾ ಅವರನ್ನು ಕೂಡಾ ಅರ್ಜಿಯಲ್ಲಿ ಹೆಸರಿಸಲಾಗಿದೆ.
ಕಲಾಪದ ವೀಡಿಯೊಗಳನ್ನು ತೆಗೆದುಹಾಕಬೇಕೆಂಬ ನ್ಯಾಯಾಲಯದ ಆದೇಶವನ್ನು ಪಾಲಿಸುವುದಾಗಿ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನ ಮಾಲಕಸಂಸ್ಥೆ ಮೆಟಾದ ನ್ಯಾಯವಾದಿ ತಿಳಿಸಿದ್ದಾರೆ. ಇಂತಹ ಕ್ಲಿಪ್ಗಳನ್ನು ಒಳಗೊಂಡ ಯಾವುದೇ ವೀಡಿಯೋಗಳನ್ನು ತೆಗೆದುಹಾಕುವಂತೆಯೂ ಯೂಟ್ಯೂಬ್ ಹಾಗೂ ಎಕ್ಸ್ಗೂ ಇದೇ ನಿರ್ದೇಶನಗಳ್ನು ನೀಡಲಾಗಿದೆ.
ಕೇಜ್ರಿವಾಲ್, ರವೀಶ್ ಕುಮಾರ್ ಸೇರಿದಂತೆ ಪಿಐಎಲ್ನಲ್ಲಿ ಉಲ್ಲೇಖಿಸಲಾದವರಿಗೂ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.

