ಡೆಹರಾಡೂನ್: ಆರು ತಿಂಗಳ ಬಳಿಕ ಉತ್ತರಾಖಂಡದ ಪ್ರಸಿದ್ಧ ಬದ್ರಿನಾಥ ದೇವಸ್ಥಾನವು ಗುರುವಾರ ಭಕ್ತರಿಗಾಗಿ ಪುನಃ ತೆರೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆಯನ್ನು ನೆರವೇರಿಸಲಾಗಿದೆ.
ದೇಶದ ನಾನಾ ಭಾಗಗಳಿಂದ ಮತ್ತು ವಿದೇಶಗಳಿಂದಲೂ ಸುಮಾರು 15 ಸಾವಿರ ಯಾತ್ರಿಕರು ದೇವರ ದರ್ಶನಕ್ಕೆ ಬಂದಿದ್ದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಭಟ್ ಕೂಡ ಈ ವೇಳೆ ಹಾಜರಿದ್ದರು. ಸರ್ಕಾರದ ನಿರ್ವಹಣೆ ಕುರಿತು ಭಕ್ತರಿಂದ ಅಭಿಪ್ರಾಯ ಕೇಳಿದರು.
ದೇವಸ್ಥಾನವು ಮತ್ತೊಮ್ಮೆ ತೆರೆದ ಕಾರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ದೇವಸ್ಥಾನಗಳು ಈಗಾಗಲೇ ಭಕ್ತರಿಗಾಗಿ ತೆರೆದಿವೆ.

