ಬುಡಾಪೆಸ್ಟ್: ಅಮೆರಿಕದ 'ಟೂಲ್‌ಕಿಟ್‌ನಲ್ಲಿರುವ ಟೂಲ್'ಗಳನ್ನು ಇರಾನ್ ಮೇಲೆ ಬಳಸಲು ನಾವಿನ್ನು ನಿರ್ಧರಿಸಿಲ್ಲ ಎಂಬುದು ಅವರ ಗಮನದಲ್ಲಿರಲಿ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನೊಂದಿಗಿನ ಮಾತುಕತೆಯು ಯಶಸ್ವಿಯಾಗುವ ಸಾಧ್ಯತೆಯಿದೆ. ಹಾಗಾದರೆ ಮಾತ್ರ ನಾವು ಆ ಅಸ್ತ್ರಗಳನ್ನು ಬಳಸುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.
ನಮ್ಮ ಟೂಲ್‌ಕಿಟ್‌ನಲ್ಲಿರುವ ಟೂಲ್‌ಗಳನ್ನು ಯಾವಾಗ ಬಳಸಬೇಕು ಎನ್ನುವುದನ್ನು ಅಧ್ಯಕ್ಷ ಟ್ರಂಪ್ ನಿರ್ಧರಿಸುತ್ತಾರೆ. ಇರಾನ್ ತನ್ನ ನಿಲುವು ಬದಲಾಯಿಸಿಕೊಳ್ಳದೇ ಇದ್ದರೆ, ಅವುಗಳನ್ನು ಬಳಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಮೆರಿಕವು ತನ್ನ ಮಿಲಿಟರಿ ಉದ್ದೇಶಗಳನ್ನು ಪೂರ್ಣಗೊಳಿಸಿದೆ. ಕದನವಿರಾಮಕ್ಕಾಗಿ ಅಮೆರಿಕ ನೀಡಿರುವ ಗಡುವು ಮುಗಿದ ನಂತರ, ಇರಾನ್ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಆಲೋಚಿಸುತ್ತೇವೆ ಎಂದು ಹೇಳಿದ್ದಾರೆ.
ಜೆ.ಡಿ. ವ್ಯಾನ್ಸ್ ಅವರು ಹಂಗೇರಿ ಪ್ರವಾಸದಲ್ಲಿದ್ದಾರೆ.
ಅಮೆರಿಕ ನೀಡಿರುವ ಗಡುವಿನ ಒಳಗೆ ಕದನವಿರಾಮ ಒಪ್ಪಂದಕ್ಕೆ ಸಹಿ ಹಾಕದೇ ಇದ್ದರೆ, ಇರಾನ್ ನಾಗರಿಕತೆಯು ಸರ್ವನಾಶವಾಗಲಿದೆ ಎಂದು ಅಧ್ಯಕ್ಷ ಟ್ರಂಪ್, ಇರಾನ್‌ಗೆ ಎಚ್ಚರಿಕೆ ನೀಡಿದ್ದರು.

