HEALTH TIPS

ಚಂದ್ರನ ದಾಖಲೆಯ ಪರಿಭ್ರಮಣೆ ನಡೆಸಿದ 'ಆರ್ಟೆಮಿಸ್‌-2'

ಹೂಸ್ಟನ್: ನಾಸಾದ ಮಹತ್ವಾಕಾಂಕ್ಷೆಯ 'ಆರ್ಟೆಮಿಸ್-2'ನ ಓರಿಯೋನ್‌ ಕೋಶವು ಸೋಮವಾರ ರಾತ್ರಿ ಚಂದ್ರನ ಸುತ್ತ ಐತಿಹಾಸಿಕ ಪರಿಭ್ರಮಣೆ ನಡೆಸಿದೆ.

ನಾಲ್ವರು ಗಗನಯಾನಿಗಳಿದ್ದ ಅಮೆರಿಕದ ಓರಿಯೊನ್‌ ಕೋಶವು ಚಂದ್ರನ ಸುತ್ತ ಏಳು ಗಂಟೆ ಪರಿಭ್ರಮಣೆ ಮಾಡಿದ ವೇಳೆ ಭೂಮಿಗೆ ಗೋಚರಿಸದ, ಚಂದ್ರನ ಇನ್ನೊಂದು ಬದಿಯ ಈ ಹಿಂದೆ ಕಂಡಿರದ ಹಲವು ಚಿತ್ರಗಳನ್ನು ಸೆರೆಹಿಡಿದು ನಾಸಾಗೆ ಕಳುಹಿಸುತ್ತಿದೆ.

ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ನಾಸಾ, ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನಿಗಳನ್ನು ಕಳುಹಿಸಿತ್ತು. ಈ ಪರಿಭ್ರಮಣೆಯು 'ಅಪೋಲೊ ಯುಗ'ದ ನಂತರ ಚಂದ್ರನಿಂದ ನಾಸಾದ ಮೊದಲ ಪಯಣವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಇದು ಮುನ್ನುಡಿ ಬರೆದಿದೆ.

1972ರಲ್ಲಿ 'ಅಪೋಲೊ-13' ತಂಡವು ಚಂದ್ರನಲ್ಲಿಗೆ ಪಯಣಿಸಿತ್ತು. 248,655 ಮೈಲಿ( 400,171 ಕಿಲೋಮೀಟರ್) ದೂರ ಕ್ರಮಿಸಿದ್ದ ಅಪೋಲೊದ ದಾಖಲೆಯನ್ನು 'ಆರ್ಟೆಮಿಸ್-2' ಮೀರಿ ಸಾಗಿದೆ.

'ಚಂದ್ರನನ್ನು ಈಗ ಬರಿಗಣ್ಣಿನಲ್ಲಿ ನೋಡಬಹುದು ಎಂದು ನನ್ನ ಮನಸ್ಸಿಗೆ ಅನ್ನಿಸಿತು. ಇದು ನಂಬಲಸಾಧ್ಯವಾದುದು. ಈ ಪೀಳಿಗೆ ಮತ್ತು ಮುಂದಿನ ಪೀಳಿಗೆ ಈ ದಾಖಲೆಯನ್ನು ಬೇಗ ಮುರಿಯಬೇಕು' ಎಂದು ಕೆನಡಾದ ಗಗನಯಾನಿ ಜೆರೆಮಿ ಹ್ಯಾನ್ಸನ್‌ ಅವರು ರೇಡಿಯೊ ಸಂದೇಶ ರವಾನಿಸಿದ್ದಾರೆ.

'ಅಪೋಲೊ 13'ರ ದಾಖಲೆಯನ್ನು ಅಳಿಸಿಹಾಕಿದ ನಂತರ ಈ ಗಗನಯಾನಿಗಳು ಈಗಾಗಲೇ ಗುರ್ತಿಸಿರುವ ಚಂದ್ರನ ಎರಡು ಹೊಸ ಕುಳಿಗಳಿಗೆ ಹೆಸರು ಇಡಲು ಅನುಮತಿ ಕೋರಿದರು. ತಾವು ತೆರಳಿದ್ದ ಕೋಶದ ಹೆಸರು ಮತ್ತು 2020ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ ಕಮಾಂಡರ್ ರೀಡ್‌ ವೈಸ್‌ಮನ್ ಅವರ ಪತ್ನಿಯ ಹೆಸರನ್ನು ನಾಮಕರಣ ಮಾಡುವುದಾಗಿ ಹೇಳಿದರು.

 ಆರ್ಟಿಮಸ್-2 ಗಗಯಾನಿಗಳು

ಈ ಮನವಿಯಿಂದ ವೈಸ್‌ಮನ್‌ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದವು. ನಾಲ್ವರೂ ಗಗನಯಾನಿಗಳು ಭಾವುಕರಾದರು. ಇಡೀ ದೃಶ್ಯವನ್ನು ಚಿತ್ರಗಳ ರೂಪದಲ್ಲಿ ರೇಡಿಯೊದಲ್ಲಿ ಪ್ರಸಾರ ಮಾಡಲಾಯಿತು.

ಚಂದ್ರ ಮತ್ತು ಭೂಮಿಯನ್ನು ಒಂದೇ ಬಾರಿಗೆ ಸೆರೆಹಿಡಿದಿರುವುದಾಗಿ ಗಗನಯಾನಿಗಳು ಹ್ಯೂಸ್ಟನ್‌ನಲ್ಲಿರುವ ವಿಜ್ಞಾನಿಗಳಿಗೆ ವಿವರಣೆ ನೀಡಿದರು.

'ಕೆಲವು ಶಿಖರಗಳು ಹೊಳೆಯುತ್ತಿದ್ದವು. ಹಿಮದಿಂದ ಆವೃತ್ತವಾಗಿದ್ದರೂ ಅವು ಗೋಚರಿಸಿದವು' ಎಂದು ಪೈಲಟ್ ವಿಕ್ಟರ್‌ ಗ್ಲೋವರ್‌ ಅವರು ಹೇಳಿದರು.

ಅತ್ಯಾಧುನಿಕ ನಿಕಾನ್ ಕ್ಯಾಮೆರಾದ ಮೂಲಕ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಕೆಲವು ಚಿತ್ರಗಳನ್ನು ಸೆರೆಹಿಡಿಯಲು ಗಗನಯಾನಿಗಳು ತಮ್ಮ ಐಫೋನ್‌ಗಳನ್ನೂ ಬಳಸಿದರು.

ಅಮೆರಿಕದ ರೀಡ್‌ ವೈಸ್‌ಮನ್‌, ವಿಕ್ಟರ್‌ ಗ್ಲೋವೆರ್‌, ಕ್ರಿಸ್ಟಿನಾ ಕೋಚ್‌ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್‌ ತಂಡದಲ್ಲಿದ್ದರು. 53 ವರ್ಷಗಳ ಬಳಿಕ ಚಂದ್ರನನ್ನು ಮನುಷ್ಯ ಮತ್ತೊಮ್ಮೆ ಹತ್ತಿರದಿಂದ ನೋಡಿದ ದಾಖಲೆಯನ್ನು ಈ ತಂಡ ಬರೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries