HEALTH TIPS

ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಮತ್ತು ಡೊನಾಲ್ಡ್ ಟ್ರಂಪ್ ಸೋದರ ಸಂಬಂಧಿಗಳೇ?

 ವಾಷಿಂಗ್ಟನ್: ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ದೂರದ ಸೋದರ ಸಂಬಂಧಿಗಳು ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. 


ಈ ಕುರಿತು 'ದಿ ಡೈಲಿ ಮೇಲ್' ಅಧ್ಯಯನ ವರದಿಯೊಂದನ್ನು ಪ್ರಕಟಿಸಿದೆ.

ವರದಿಯ ಪ್ರಕಾರ ಟ್ರಂಪ್ ಹಾಗೂ ಚಾರ್ಲ್ಸ್ ಬ್ರಿಟನ್‌ನ ಹಳೆಯ ರಾಜಮನೆತನದ ಕೊಂಡಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಟ್ರಂಪ್ ಹಾಗೂ ಚಾರ್ಲ್ಸ್ ವಂಶಾವಳಿಯ ವಿವರಗಳನ್ನು ಡೈಲಿ ಮೇಲ್ ಹಂಚಿಕೊಂಡಿದೆ.

ಡೊನಾಲ್ಡ್ ಟ್ರಂಪ್ ಅವರ ತಾಯಿ ಮೇರಿ ಆನ್ ಮ್ಯಾಕ್ಲಿಯೋಡ್, ಸ್ಕಾಟ್ಲೆಂಡ್ ಮೂಲದವರು. ಈ ಸ್ಕಾಟಿಷ್ ಕೊಂಡಿಯೇ ಅವರನ್ನು ಬ್ರಿಟಿಷ್ ರಾಜಮನೆತನದೊಂದಿಗೆ ಸಂಪರ್ಕಿಸುತ್ತದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, 'ವ್ಹಾಹ್, ಈ ವಿಚಾರ ಅತ್ಯುತ್ತಮ. ನಾನು ಯಾವಾಗಲೂ ಬಂಕಿಂಗ್‌ಹ್ಯಾಮ್ ಅರಮನೆಯಲ್ಲಿ ವಾಸಿಸಲು ಬಯಸುತ್ತೇನೆ. ಇನ್ನು ಕೆಲವೇ ಹೊತ್ತಿನಲ್ಲಿ ರಾಜ ಮತ್ತು ರಾಣಿಯೊಂದಿಗೆ ಈ ಕುರಿತು ಮಾತನಾಡಲಿದ್ದೇನೆ' ಎಂದಿದ್ದಾರೆ.

'ದಿ ಡೈಲಿ ಮೇಲ್' ವರದಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries