ಗಜಿಯಾಬಾದ್: ಗಜಿಯಾಬಾದ್ ನ ಅಭಯ್ ಖಂಡ್ನ ಇಂದಿರಾಪುರಂ ಪ್ರದೇಶದಲ್ಲಿರುವ ಗೌರ್ ಗ್ರೀನ್ ಅವೆನ್ಯೂ ಅಪಾರ್ಟ್ಮೆಂಟ್ನಲ್ಲಿ ಇಂದು ಬುಧವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿ ನಿವಾಸಿಗಳಲ್ಲಿ ಭೀತಿಯ ವಾತಾವರಣ ಉಂಟಾಯಿತು. ಒಂದು ಫ್ಲ್ಯಾಟ್ನಲ್ಲಿ ಆರಂಭವಾದ ಬೆಂಕಿ ಶೀಘ್ರವೇ ವ್ಯಾಪಿಸಿ ತೀವ್ರಗೊಂಡು, ದಟ್ಟ ಹೊಗೆ ಆಕಾಶದತ್ತ ದೂರದಿಂದಲೂ ಕಾಣಿಸುತ್ತಿತ್ತು.
ಒಂಬತ್ತನೇ ಮಹಡಿಯಲ್ಲಿ ಬೆಂಕಿ ಆರಂಭ
ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂಬತ್ತನೇ ಮಹಡಿಯ ಫ್ಲ್ಯಾಟ್ನಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿ ಮೇಲಿನ10ನೇ ಮಹಡಿಯವರೆಗೂ ವ್ಯಾಪಿಸಿದೆ. ಆರಂಭದಲ್ಲಿ ಒಂದೇ ಫ್ಲ್ಯಾಟ್ಗೆ ಸೀಮಿತವಾಗಿದ್ದ ಬೆಂಕಿ ನಂತರ ಕಟ್ಟಡದ ಹಲವು ಮನೆಗಳಿಗೆ ಹರಡಿದೆ. ಅಂದಾಜು ಪ್ರಕಾರ ಸುಮಾರು 10 ರಿಂದ 12 ಫ್ಲ್ಯಾಟ್ಗಳು ಗಂಭೀರವಾಗಿ ಹಾನಿಗೊಳಗಾಗಿವೆ. ಏರ್ಕಂಡೀಷನರ್ಗೆ ಸಂಬಂಧಿಸಿದ ವಿದ್ಯುತ್ ದೋಷವೇ ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸುತ್ತಿದ್ದು, ನಿಖರ ಕಾರಣ ತನಿಖೆ ಬಳಿಕವೇ ಗೊತ್ತಾಗಲಿದೆ.

